ಕಾಪು, ಜು.19: ಪಿಲಾರುಕಾನ ಕಾಡಿನ ರಸ್ತೆಯಲ್ಲಿ ಕಾಡೆಮ್ಮೆಯೊಂದು ಇಂದು ಬೆಳಿಗ್ಗೆ ಪತ್ತೆಯಾಗಿದೆ.
ರಸ್ತೆಯ ಎರಡು ಕಡೆ ಬೇಲಿ ಇರುವುದರಿಂದ ಕಾಡಿಗೆ ಮರಳಿ ಹೋಗಲು ಕಾಡೆಮ್ಮೆ ಪ್ರಯತ್ನಿಸುತ್ತಿತ್ತು.
ಕಾಡೆಮ್ಮೆ ರಸ್ತೆ ಬದಿ ನಿಂತಿರುವುದನ್ನು ಕಂಡು ವಾಹನ ಸವಾರರು ಭಯದಲ್ಲಿ ಸಂಚರಿಸುವ ದೃಶ್ಯ ಸಾಮಾನ್ಯವಾಗಿತ್ತು.