ಅವಳಿನಗರದಲ್ಲಿ ಬಿಡದ ಮಳೆ ; ಬೆಚ್ಚಿದ ಜನರು : ಬಿ.ಆರ್.ಟಿ.ಎಸ್ ಕಾರಿಡಾರ್ ಜಲಾವೃತ

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಬಿಡದೇ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿರುವುದು ಒಂದು ಕಡೆಯಾದರೇ, ಮತ್ತೊಂದು ಕಡೆಯಲ್ಲಿ ಬಿ.ಆರ್.ಟಿ.ಎಸ್ ಕಾರಿಡಾರ್ ಜಲಾವೃತಗೊಂಡಿವೆ.



ಹುಬ್ಬಳ್ಳಿ ಧಾರವಾಡ ಅವಳಿನಗರದ ಮಧ್ಯದಲ್ಲಿನ ನವನಗರ, ಅಮರಗೋಳ, ಕೆಎಂಎಫ್ ಸೇರಿದಂತೆ ಅವಳಿನಗರದ ಮಧ್ಯದಲ್ಲಿನ ಬಿ.ಆರ್.ಟಿ.ಎಸ್ ಕಾರಿಡಾರ್ ಸಂಪೂರ್ಣ ಜಲಾವೃತಗೊಂಡಿದ್ದು, ಜನರು ಬಿ.ಆರ್.ಟಿ.ಎಸ್ ಯೋಜನೆ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ. ಅವೈಜ್ಞಾನಿಕ ಕಾರಿಡಾರ್ ನಿರ್ಮಿಸಿದ್ದು, ನೀರು ಸಮರ್ಪಕವಾಗಿ ಹರಿದು ಹೋಗಲು ಆಗದೇ ಇರುವ ಕಾರಣ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಇನ್ನೂ ಹುಬ್ಬಳ್ಳಿ ಧಾರವಾಡ ಅವಳಿನಗರದ ಮಧ್ಯದಲ್ಲಿ ಪ್ರತಿವರ್ಷವೂ ಇಂತಹ ಘಟನೆಗಳು ಸರ್ವೇಸಾಮಾನ್ಯವಾಗಿದ್ದು, ಈ ಬಗ್ಗೆ ಬಿ.ಆರ್.ಟಿ.ಎಸ್ ಸೂಕ್ತ ಕ್ರಮಗಳನ್ನು ಜರುಗಿಸುವ ಕಾರ್ಯ ಮಾಡಬೇಕಿದೆ.

You cannot copy content from Baravanige News

Scroll to Top