ಉಡುಪಿ, ಜು.21: ಮಳೆಗಾಲದಲ್ಲಿ ಕರಾವಳಿಯಲ್ಲಿ ಚಿಕ್ಕಮೇಳ ನಡೆಯುತ್ತವೆ. ಯಕ್ಷಗಾನ ಕಲಾವಿದರು ಮನೆಗಳಿಗೆ ತೆರಳಿ ಅಲ್ಲಿ ಚಿಕ್ಕದಾಗಿ ,ಚೊಕ್ಕದಾಗಿ ಪ್ರಸಂಗವನ್ನು ಪ್ರಸ್ತುತಪಡಿಸುತ್ತಾರೆ.ಕಳೆದೆರಡು ತಿಂಗಳುಗಳಿಂದ ಇದು ನಡೆಯುತ್ತಿದೆ.
ಹೀಗೆ ಬಂದ ಕಲಾವಿದರಿಗೆ ಗೌರವ ಧನ ನೀಡಲಾಗುತ್ತದೆ. ಆದರೆ ಇತ್ತೀಚೆಗೆ ಚಿಕ್ಕಮೇಳವು ಯಕ್ಷಗಾನದ ಪರಿಧಿಯನ್ನು ಮೀರಿ ದುರ್ಬಳಕೆ ಆಗುತ್ತಿದೆ ಎಂದು ಕಲಾಭಿಮಾನಿಗಳು ಅಸಮಾಧಾನಗೊಂಡಿದ್ದಾರೆ.
ಮನೆಯೊಂದರಲ್ಲಿ ನಡೆಯುತ್ತಿರುವ ಚಿಕ್ಕಮೇಳದ ಈ ದೃಶ್ಯ, ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದು ,”ಇದು ಯಕ್ಷಗಾನ ಅಲ್ಲ ,ದೊಂಬರಾಟ. ಕಲೆಯ ಮರ್ಯಾದೆ ತೆಗೀಬೇಡಿ” ಎಂದು ಯಕ್ಷಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.