ಒಡಿಶಾದಿಂದ ನಾಪತ್ತೆಯಾಗಿದ್ದ ಬಾಲಕ ಉಡುಪಿಯಲ್ಲಿ ಪತ್ತೆ

ಉಡುಪಿ : ನಾಪತ್ತೆಯಾಗಿದ್ದ ಬಾಲಕನ ಪತ್ತೆಗೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾದ ವೀಡಿಯೋ ಸಹಕಾರಿಯಾದ ಘಟನೆ ಉಡುಪಿಯಲ್ಲಿ ನಡೆದಿದೆ.

ಒಡಿಶಾದಿಂದ ಕಾಣೆಯಾಗಿ ಉಡುಪಿಗೆ ಬಂದಿದ್ದ ಬಾಲಕ ಇಲ್ಲಿನ ಸಮಾಜ ಸೇವಕರ ಮಾನವೀಯ ನೆರವಿನಿಂದಾಗಿ 6 ತಿಂಗಳ ಬಳಿಕ ತನ್ನ ಕುಟುಂಬವನ್ನು ಸೇರುವಲ್ಲಿ ಯಶಸ್ವಿಯಾಗಿದ್ದಾನೆ.


6 ತಿಂಗಳ ಹಿಂದೆ ಉಡುಪಿ ನಗರ ಹಾಗೂ ಬಸ್‌ ನಿಲ್ದಾಣ ಪರಿಸರದಲ್ಲಿ ಸುತ್ತಾಡುತ್ತಿದ್ದ ವಿಶೇಷ ಚೇತನ ಬಾಲಕ ದೀಪಕ್‌ (18) ನನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ ಉಪ್ಪೂರಿನ ಬೌದ್ಧಿಕ ದಿವ್ಯಾಂಗರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು. ಈಗ ಬಾಲಕನ ಹೆತ್ತವರು ಪತ್ತೆಯಾಗಿದ್ದಾರೆ.

ಬಾಲಕ ದೀಪಕ್‌ ಆಶ್ರಯ ಪಡೆದಿದ್ದ ಸ್ಪಂದನ ಕೇಂದ್ರದಲ್ಲಿ ಇತ್ತೀಚಿಗೆ ಗ್ರೇಟ್‌ ಇಂಡಿಯನ್‌ ಎಎಸ್‌ಎಂಆರ್‌ ಎಂಬ ಯೂಟ್ಯೂಬ್‌ ಚಾನಲ್‌ ಒಂದು ಆಶ್ರಮದ ನಿವಾಸಿಗಳಿಗೆ ಭೋಜನ ನೀಡಿತ್ತು. ಈ ಸಂದರ್ಭದಲ್ಲಿ ಆಶ್ರಮ ವಾಸಿಗಳು ಊಟ ಮಾಡುವುದನ್ನು ಚಿತ್ರೀಕರಿಸಿ ಯೂಟ್ಯೂಬ್‌ಗ ಅಪ್ಲೋಡ್‌ ಮಾಡಿದ್ದರು. ಒಡಿಶಾದಲ್ಲಿ ಈ ವೀಡಿಯೋವನ್ನು ನೋಡಿದ ಅಲ್ಲಿನ ಯುವಕ ನಾಪತ್ತೆಯಾದ ದೀಪಕ್‌ನನ್ನು ಗುರುತಿಸಿ, ತತ್‌ಕ್ಷಣ ಬಾಲಕನ ಹೆತ್ತವರಿಗೆ ಮಾಹಿತಿ ನೀಡಿದ್ದಾರೆ.

Scroll to Top