ಉಡುಪಿ, ಜು.25: ಶಾಸಕ ಯಶ್ ಪಾಲ್ ಸುವರ್ಣ ರವರು ಕಡೆಕಾರ್ ಗ್ರಾಮ ಪಂಚಾಯತ್ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಅಹವಾಲು ಸ್ವೀಕರಿಸಿ ಮಾತನಾಡಿದ ಯಶ್ ಪಾಲ್ ಸುವರ್ಣ ಶಾಸಕರಾದ ಬಳಿಕ ಪ್ರಥಮ ಬಾರಿಗೆ ಕಡೆಕರ್ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್ ಗಳಿಗೂ ಭೇಟಿ ನೀಡಲಿದ್ದು ಗ್ರಾಮದ ಎಲ್ಲಾ ಸಮಸ್ಯೆ, ಬೇಡಿಕೆಗಳ ಬಗ್ಗೆ ಸದಾ ಸ್ಪಂದಿಸುವ ಆಶಯ ವ್ಯಕ್ತಪಡಿಸಿದರು.
ಮುಂದಿನ ಬಾರಿ ಭೇಟಿ ನೀಡುವ ಸಂದರ್ಭದಲ್ಲಿ ಇಲಾಖಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ರೂಪಿಸುವುದಾಗಿ ತಿಳಿಸಿದರು.
ರಸ್ತೆ ನಿರ್ಮಾಣ, ಅಂಗನವಾಡಿ ಕಟ್ಟಡ, ಕುಡಿಯುವ ನೀರು, ನದಿ ದಂಡೆ ಸಂರಕ್ಷಣೆ, ಕೃತಕ ನೆರೆ ಹಾವಳಿ ತಡೆಗೆ ಸಮರ್ಪಕ ತೋಡು ಮುಂತಾದ ಬೇಡಿಕೆಗಳ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಸರಸ್ವತಿ, ಉಪಾಧ್ಯಕ್ಷರಾದ ನವೀನ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು , ಕಡೆಕಾರ್ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರದೀಪ ಚಂದ್ರ ಕುತ್ಪಾಡಿ, ರಘುನಾಥ್ ಕೋಟ್ಯಾನ್, ತಾರನಾಥ್ ಸುವರ್ಣ, ಮಾಜಿ ತಾಲೂಕ ಪಂಚಾಯತ್ ಸದಸ್ಯರಾದ ಶಿಲ್ಪಾ ರವೀಂದ್ರ , ಪಂಚಾಯತ್ ಸದಸ್ಯರಾದ ರಾಘವೇಂದ್ರ ಕುತ್ಪಾಡಿ , ವಿನೋದಿನಿ, ಸತೀಶ್ ಕೋಟ್ಯಾನ್ , ಸವಿತಾ ಹರೀಶ್ ಪ್ರವೀಣ್ ವೇದಾವತಿ ವಸಂತ್ ಕುಂದರ್, ಸುಲೋಚನ ,ನಿರ್ಮಲಾ ,ಇಂದಿರಾ ಶೆಟ್ಟಿ, ಲೀಲಾ, ಸುಕನ್ಯಾ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿದ್ದೇಶ್ ಹಾಗೂ ಗ್ರಾಮಸ್ಥರಾದ ರಿಕೇಶ್ ಪಾಲನ್ ,ವಿಜಯ್ ಭಟ್ , ಅಶೋಕ್ ಭಂಡಾರಿ, ಜಯಕರ್ ಮೊದಲಾದವರು ಉಪಸ್ಥಿತರಿದ್ದರು.