ದೈವಾರಾಧನೆಯನ್ನು ಮಾಡಿಕೊಂಡು ಬರುತ್ತಿರುವ ತುಳುನಾಡಿನ ಜನ 400 ಕ್ಕೂ ಮಿಕ್ಕಿದ ದೈವಗಳನ್ನು ನಂಬಿಕೊಂಡು ಬರುತ್ತಿದ್ದಾರೆ. ತುಳಿನಾಡಿನ ಪ್ರತಿಯೊಂದು ಕುಟುಂಬವು ಈ ರೀತಿಯ ದೈವರಾಧನೆಗಳನ್ನು ಮಾಡುತ್ತಾರೆ. ಇದೇ ಕಾರಣಕ್ಕಾಗಿ ತುಳುನಾಡಿನಲ್ಲಿ ದೇವರಿಗಿಂತಲೂ ದೈವಕ್ಕೆ ಪ್ರಾಮುಖ್ಯತೆ ಇದೆ.
ಅದರಲ್ಲೂ ತುಳುನಾಡಿನ ಜನರ ಅತ್ಯಂತ ನಂಬಿಕೆಯ ದೈವವಾದ ಕೊರಗಜ್ಜನ ಮೇಲೆ ಅಪಾರವಾದ ನಂಬಿಕೆ, ಶ್ರದ್ದೆ ಇದೆ. ಕೊರಗಜ್ಜನ ನನಂಬ ದ ಜನ, ಕುಟುಂಬಗಳು ತುಳುನಾಡಿನಲ್ಲಿ ಸಿಗುವುದು ಅಪರೂಪ. ಕೊರಗಜ್ಜನ ಮೇಲಿನ ನಂಬಿಕೆಯ ಹಿನ್ನೆಲೆಯಲ್ಲಿ ತುಳಿನಾಡಿನಾದ್ಯಂತ ಕೊರಗಜ್ಜನಿಗೆ ಕಟ್ಟೆಗಳನ್ನು ಕಟ್ಟಿ ಆರಾಧಿಸಲಾಗುತ್ತಿದೆ.
ಕೊರಗಜ್ಜನ ಕಟ್ಟೆಗಳಲ್ಲಿ ಪವಾಡ
ಕೆಲವೊಂದು ಕಡೆಗಳಲ್ಲಿ ಈ ಕೊರಗಜ್ಜನ ಕಟ್ಟೆಗಳಲ್ಲಿ ಪವಾಡದ ಘಟನೆಗಳು ನಡೆದ ಉದಾಹರಣೆಗಳಿವೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕೊರಗಜ್ಜನ ಕಟ್ಟೆಗಳನ್ನೇ ಗುರಿಯಾಗಿಸಿಕೊಂಡು ಕಿಡಿಗೇಡಿಗಳು ಕಟ್ಟೆಯನ್ನು ಹಾನಿ ಮಾಡುವ ದುಷ್ಕೃತ್ಯಗಳೂ ನಡೆಯುತ್ತಿವೆ.
ವೀಳ್ಯದೆಲೆಯಲ್ಲಿ ಮೂಡಿದೆ ಬೇರು
ಕೊರಗಜ್ಜನ ಪವಾಡಗಳಿಗೆ ಇನ್ನೊಂದು ಸೇರ್ಪಡೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಗುತ್ತಿಗಾರಿನ ಏರಣಗುಡ್ಡೆ ಎಂಬಲ್ಲಿ ಆಗಿದೆ. ಕೊರಗಜ್ಜ ದೈವಕ್ಕೆ ಪ್ರಾರ್ಥನೆ ಮಾಡಿ ಇರಿಸಿದ್ದ
ವೀಳ್ಯದೆಲೆಯಲ್ಲಿ ಬೇರು ಬರುವ ಮೂಲಕ ಅಚ್ಚರಿ ಮೂಡಿಸಿದ ಘಟನೆ ಗುತ್ತಿಗಾರು ಗ್ರಾಮದ ಮೊಗ್ರದ ಏರಣಗುಡ್ಡೆಯಲ್ಲಿ ನಡೆದಿದೆ.
ದೈವಕ್ಕೆ ಇರಿಸಿದ್ದ ವೀಳ್ಯದೆಲೆ
ಕಳೆದ ತಿಂಗಳು ಮಗುವಿಗೆ ಅನಾರೋಗ್ಯ ಕಾಡಿದ ಹಿನ್ನಲೆಯಲ್ಲಿ ನೇರ ಗುಡ್ಡೆ ನಿವಾಸಿ ಶೀನಪ್ಪ, ಅವರ ಮನೆಯ ವಠಾರದಲ್ಲಿದ್ದ ಕೊರಗಜ್ಜ ದೈವಕ್ಕೆ ವೀಳ್ಯದೆಲೆ, ಅಡಿಕೆ ಇರಿಸಿ ಪ್ರಾರ್ಥನೆ ಮಾಡಿದ್ದರು. ಕೆಲವು ದಿನಗಳವರೆಗೂ ಹಸಿರಾಗಿಯೇ ಇದ್ದ ವೀಳ್ಯದೆಲೆ ಅನಂತರ ಬೇರು ಬರಲು ಆರಂಭಿಸಿತು. ತಕ್ಷಣ ಶೀನಪ್ಪ ಅವರು ದೈವಜ್ಞರ ಮೂಲಕ ತಿಳಿದಾಗ ಸತ್ಯದ ಅರಿವಾಯಿತು. ಮಗು ಆರೋಗ್ಯವಾಗಿರುವುದೂ ತಿಳಿಯಿತು. ಹೀಗಾಗಿ ಅದೇ ವೀಳ್ಯದೆಲೆಯನ್ನು ಅವರು ಈಗ ಹೂಕುಂಡದಲ್ಲಿ ಇರಿಸಿ ಬೆಳೆಸಲಾಗುತ್ತಿದ್ದು, ಈಗಲೂ ವೀಳ್ಯದೆಲೆ ಹಸಿರಾಗಿಯೇ ಇದೆ