ಡ್ರಗ್ ಮಾಫಿಯಾ ವಿರುದ್ದ ಉಡುಪಿ ಪೊಲೀಸರ ನಿರ್ದಾಕ್ಷಿಣ್ಯ ಕ್ರಮ : ಹಾಸ್ಟೆಲ್, ಅಪಾರ್ಟ್‌ಮೆಂಟ್‌ಗಳಿಗೂ ದಾಳಿ

ಉಡುಪಿ: ಮಾದಕ ದೃವ್ಯದ ವಿರುದ್ದ ಉಡುಪಿ ಪೊಲೀಸರು ನಿರ್ದಾಕ್ಷಿಣ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಜನತೆಯಿಂದ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.





ದಾಳಿಗಳನ್ನು ಪೊಲೀಸರು ಮುಂದುವರೆಸಿದ್ದು ಯಾವುದೇ ಮುಲಾಜಿಲ್ಲದೇ ಕ್ರಮಗಳನ್ನು ಜರುಗಿಸುತ್ತಿದ್ದಾರೆ.

ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಉಡುಪಿಯ ಮಣಿಪಾಲದ ವಿದ್ಯಾರತ್ನನಗರ ಹಾಗೂ ಸರಳೇಬೆಟ್ಟುವಿನ ವಸತಿ ಸಮುಚ್ಚಯಗಳಿಗೆ ದಾಳಿ ನಡೆಸಿದ ಮಣಿಪಾಲ ಪೊಲೀಸರು ಮೂವರು ಗಾಂಜಾ ಪೆಡ್ಲರ್ ವಿದ್ಯಾರ್ಥಿಗಳನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಇವರಿಂದ 1.10ಲಕ್ಷ ರೂ. ಮೌಲ್ಯದ ಸುಮಾರು 2.100ಕೆ.ಜಿ. ಗಾಂಜಾ ವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗಾಂಜಾ ಪೆಡ್ಲರ್ಸ್‌ಗಳಾದ ಆಯುಷ್ ರಾಜ್ ಮತ್ತು ಮಯಾಸ್ ಚಂದೆಲ್ ಆತನ ಸ್ನೇಹಿತ ಶ್ರೀಕಾಂತ್ ನಿಂದ ಗಾಂಜಾ ಪಡೆದು, ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಶೇಖರಿಸಿ ಇಟ್ಟಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮಾದಕ ವಸ್ತುಗಳ ಜಾಲದ ಬಗ್ಗೆ ತನಿಖೆ ಮುಂದುವರಿಸಲಾಗಿದೆ.

Scroll to Top