ಉಡುಪಿ, ಜು.27: ಕಾಲೇಜು ಶೌಚಾಲಯದಲ್ಲಿ ಮೊಬೈಲ್ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದ ಇಂದು ನಡೆದ ಎವಿಬಿಪಿ ಪ್ರತಿಭಟನೆಯಲ್ಲಿ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಕೆಲವು ಅಂಶಗಳನ್ನು ಉಡುಪಿ ಎಸ್ಪಿ ಅಕ್ಷಯ್ ಮಚ್ಚೀಂದ್ರ ಹಾಕೆ ಮುಂದೆ ವಿವರವಾಗಿ ಬಿಚ್ಚಿಟ್ಟದ್ದಾರೆ.
ಕಾಲೇಜಿನಲ್ಲಿ ನಡೆದ ವಿಚಾರ ತಿಳಿದು ನಾವು ಪ್ರತಿಭಟನೆ ಮಾಡಿದ್ದೇವೆ. ಒಬ್ಬರು ಪೊಲೀಸ್ ಬಂದು ಮೊಬೈಲ್ ಸೀಜಾಗಿದೆ. ನಮ್ಮ ಮೇಲೆ ವಿಶ್ವಾಸ ಇಟ್ಟು ನೀವು ಕ್ಲಾಸಿಗೆ ಹೋಗಿ ಎಂದು ಹೇಳಿದ್ದರು. ಆ ವಿದ್ಯಾರ್ಥಿನಿಯರನ್ನು ಡಿಬಾರ್ ಮಾಡಿದ್ದೇವೆ ಎಂದು ಕಾಲೇಜಿನ ಮ್ಯಾನೇಜ್ಮೆಂಟ್ ಹೇಳಿದೆ. ಡಿಬಾರ್ ಆಗಿಲ್ಲ ಸಸ್ಪೆಂಡ್ ಆಗಿದೆ.
ವಾಶ್ ರೂಂನಲ್ಲಿ ಮೊಬೈಲ್ ಇಡುವುದು ಫನ್ ಎಂದು ಹೇಳುತ್ತಿದ್ದಾರೆ. ಫೋನ್ ನಲ್ಲಿ ಶೂಟಿಂಗ್ ಮಾಡಲಿಕ್ಕೆ ನಾವು ಏನು ಜೋಕರ್ ಗಳಾ? ವಾಶ್ರೂಂನಲ್ಲಿ ಫನ್ ಎಂಬ ಸ್ಟೇಟ್ಮೆಂಟ್ ಕೊಡ್ತಾಯಿದ್ದಾರೆ ಇದೇನಿದು ಸರ್ ಅವರಿಗೆ ತಲೆಯಿಲ್ವಾ?
ಕಾಲೇಜಿನಲ್ಲಿ ಒಂದು ವರ್ಷದಿಂದ ವಿಡಿಯೋ ಆಗುತ್ತಿದೆ ನಮಗೆ ಗೊತ್ತಿದೆ. ನಾವು ಅದಕ್ಕೋಸ್ಕರ ಪ್ರತಿಭಟನೆ ಮಾಡಿದ್ದೇವೆ. ಮ್ಯಾನೇಜ್ಮೆಂಟ್ ನವರು ಫನ್ ಎಂದು ಹೇಳುತ್ತಿದ್ದಾರೆ. ಅವರ ಮನೆಯ ಹೆಣ್ಣು ಮಕ್ಕಳಿಗೆ ಆಗಿದ್ದರೆ ಬಿಟ್ಟು ಬಿಡುತ್ತಿದ್ದರಾ?
ವಿದ್ಯಾರ್ಥಿನಿಯರದ್ದು 20ಕ್ಕೆ ಫೋನ್ ಸೀಸ್ ಆಗಿದೆ. 20ನೇ ತಾರೀಕಿಗೆ ಫೋನ್ ಅವರಿಗೆ ವಾಪಸ್ ಸಿಕ್ಕಿದೆ ಎಂಬ ಮಾಹಿತಿ ನಮಗೆ ಸಿಕ್ಕಿತು. ಒಂದು ಸ್ನಾಪ್ ಚಾಟ್ ನಲ್ಲಿ ಎಲ್ಲಾ ಫೋಟೋಗಳನ್ನು ಶೇರ್ ಮಾಡುತ್ತಿದ್ದರು. ಅವರು ಫೋಟೋ ಸ್ಟೋರೀಸ್ ಎಲ್ಲಾ ಹಾಕುತ್ತಿದ್ದರು ಫೋನ್ ಅವರಿಗೆ ಹೇಗೆ ವಾಪಸ್ ಆಯ್ತು?