ಉಡುಪಿ : ಜಿಲ್ಲೆಯ ಕೆಮ್ಮಣ್ಣು ನಿವಾಸಿ ರಾಘವೇಂದ್ರ (44) ಜು.29 ರಂದು ನಾಪತ್ತೆಯಾಗಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇವರ ಮೊಬೈಲ್, ಕೊಡೆ, ಚಪ್ಪಲಿ ಹೂಡೆ ಯ ಕಡಲ ಕಿನಾರೆಯಲ್ಲಿ ದೊರೆತಿತ್ತು.
ಇಂದು ಮಧ್ಯಾಹ್ನ ಆಪತ್ಭಾಂಧವ ಈಶ್ವರ ಮಲ್ಪೆಯವರಿಗೆ ಮಲ್ಪೆ ಪಡುಕೆರೆ ಸಮುದ್ರದಲ್ಲಿ ಶವ ತೇಲಾಡುತ್ತಿರುವ ವಿಷಯ ತಿಳಿದು ಆ ಕೂಡಲೇ ಸ್ಥಳಕ್ಕೆ ಧಾವಿಸಿದ್ದರು.
ಮೃತದೇಹ ದಡ ಸಮೀಪ ಬರುವವರೆಗೆ ಸುಮಾರು ಎರಡು ಗಂಟೆಗಳ ಕಾಲ ಕಾದು ಕುಳಿತು, ಸಮುದ್ರದ ನೀರಿನಲ್ಲಿ ಇಳಿದು ಶವವನ್ನು ಮೇಲಕ್ಕೆ ತಂದಿರುತ್ತಾರೆ.
ಮೃತದೇಹವನ್ನು ಆಪತ್ಭಾಂಧವ ಈಶ್ವರ್ ಮಲ್ಪೆಯವರ ಆಂಬುಲೆನ್ಸ್ ಮೂಲಕ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಮಳೆಗಾಲದ ಈ ಸಮಯದಲ್ಲಿ ಕಡಲು ಪ್ರಕ್ಶುಬ್ಧಗೊಂಡಿರುವಾಗ ಯಾವುದೇ ದೋಣಿಯ ಸಹಾಯವಿಲ್ಲದೆ ಸರಕಾರದ ಯಾವುದೇ ಇಲಾಖೆಯ ಸಹಕಾರವಿಲ್ಲದೆ ಮೃತ ದೇಹವನ್ನು ಮೇಲಕ್ಕೆತ್ತಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಆಪದ್ಬಾಂಧವ ಈಶ್ವರ ಮಲ್ಪೆ ಜೊತೆಗೆ ಶಬ್ಬೀರ್ ಮಲ್ಪೆ, ರಕ್ಷಿತ್ ಕಾಪು, ದೀಪು ಮಲ್ಪೆ ಹಾಗೂ ಇಮ್ತಿಯಾಝ್ ಕೆಮಣ್ಣು, ಪ್ರತಾಪ್ ಪಡುಕೆರೆ , ಪ್ರವೀಣ್ ಮಲ್ಪೆ , ಹರ್ಷಿತ್ ಜೆ ಕುಂದರ್ ಭಾಗಿಯಾಗಿದ್ದರು.