ಉಡುಪಿ : ಕೌಟುಂಬಿಕ ಕಲಹದಿಂದ ಮನೆಬಿಟ್ಟ ಛತ್ತಿಸ್ಗಡದ ಮಹಿಳೆಯ ರಕ್ಷಣೆ

ಉಡುಪಿ : ಕಟಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಸಾರದ ಕೌಟುಂಬಿಕ ಕಲಹದಿಂದ ಮನೆಬಿಟ್ಟು ಬೀದಿಪಾಲಾದ ನೊಂದ ಛತ್ತಿಸ್ ಗಡ ಮೂಲದ ಮಹಿಳೆಯನ್ನು ವಿಶು ಶೆಟ್ಟಿಯವರು ರಕ್ಷಿಸಿ ಸಖಿ ಸೆಂಟರ್ ನಿಟ್ಟೂರಿಗೆ ಸೋಮವಾರ ರಾತ್ರಿ ದಾಖಲಿಸಿದ ಘಟನೆ ನಡೆದಿದೆ.



ಮಹಿಳೆ ಶಾರದಾ(36ವ) 10ತಿಂಗಳ ಹಿಂದೆ ಊರು ಬಿಟ್ಟು ಸುತ್ತಾಡುತ್ತಿದ್ದೇನೆ, ಗಂಡ ಹಾಗೂ ಇಬ್ಬರು ಮಕ್ಕಳಿದ್ದಾರೆ, ಮನನೊಂದು ಬೀದಿಪಾಲಾದೆ. ಇದೀಗ ಅನಾಥಳಾಗಿ ನನಗೆ ಬದುಕುವ ಆಸೆ ಬಿಟ್ಟು ಸಾಯುವ ನಿರ್ಧಾರ ಕೂಡಾ ಮಾಡಿದೆ ಆದರೆ ಮಕ್ಕಳ ನೆನಪು ಕಾಡುತ್ತದೆ ಎಂದು ಸಂತ್ರಸ್ತ ಮಹಿಳೆ ಹೇಳಿಕೆ ನೀಡಿದ್ದಾಳೆ.

ರಕ್ಷಣಾ ಸಮಯದಲ್ಲಿ ಜಯಶ್ರೀ ಉದ್ಯಾವರ, ಆಸ್ಟಿನ್ ಕಟಪಾಡಿ ಹಾಗೂ ಪೊಲೀಸ್ 112 ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸುಮಿತ್ರ ನೆರವಾಗಿದ್ದಾರೆ. ಕಾಪು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

You cannot copy content from Baravanige News

Scroll to Top