ಆದರ್ಶ ಪ್ರೆಂಡ್ಸ್ ಮಕ್ಕೇರಿಬೈಲು ಸೂಡ ಸಂಘದ ವಾರ್ಷಿಕ ಸಭೆ : 2023- 25ನೇ ಸಾಲಿನ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ

ಆದರ್ಶ ಪ್ರೆಂಡ್ಸ್ ಮಕ್ಕೇರಿಬೈಲು ಸೂಡ ಸಂಘದ ವಾರ್ಷಿಕ ಸಭೆ ಹಾಗೂ 2023- 25 ನೇ ಸಾಲಿನ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮವು ಕುಂಜಾರ್ಗಗುತ್ತು ಮನೆಯಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ವಿಶು ಸೂಡ, ಉಪಾಧ್ಯಕ್ಷರಾಗಿ ಚಂದ್ರನಾಥ್ ಶೆಟ್ಟಿ ಸೂಡ, ಕಾರ್ಯದರ್ಶಿಯಾಗಿ ಮೋಹನ್ ಆಚಾರ್ಯ, ಕೋಶಾಧಿಕಾರಿಯಾಗಿ ಅಶ್ವಥ್ ಸೂಡ, ಕ್ರೀಡಾ ‌ಕಾರ್ಯದರ್ಶಿಯಾಗಿ ಸುರೇಶ್ ಆಚಾರ್ಯ ಬೋರುಗುಡ್ಡೆ,
ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್ ರನ್ನು ಅವಿರೋಧವಾಗಿ ‌ಆಯ್ಕೆ ಮಾಡಲಾಯಿತು.

ನಿರ್ಗಮಿತ ಅಧ್ಯಕ್ಷರಾದ ಚರಣ್ ಸೂಡ ನೂತನ ಅಧ್ಯಕ್ಷರಾದ‌ ವಿಶು ಸೂಡ ರವರಿಗೆ ಅಧಿಕಾರ ಹಸ್ತಾಂತರಿಸಿದರು.

ಸಂಘದ ಗೌರವಾಧ್ಯಕ್ಷರಾದ ರಿತೇಶ್ ಕುಮಾರ್ ಶೆಟ್ಟಿಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

Scroll to Top