ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವಕುಮಾರ್ ಅವರು ಇದೀಗ ಕೆಎಂಎಫ್ ನ ನಂದಿನಿ ಹಾಲಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.
ಈ ಮೊದಲು ನಂದಿನಿ ಹಾಲಿನ ರಾಯಭಾರಿಯಾಗಿದ್ದ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರು ನಿಧನ ಹೊಂದಿದ ಹಿನ್ನೆಲೆ ನಂದಿನಿ ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳ ಮಾರುಕಟ್ಟೆಯನ್ನು ಪ್ರೋತ್ಸಾಹಿಸಲು ಕನ್ನಡ ಕಣ್ಮಣಿ ಡಾ.ರಾಜ್ ಫ್ಯಾಮಿಲಿಯವರೇ ಸೂಕ್ತವೆಂದು ಕೆಎಂಎಫ್ ಆಡಳಿತ ಮಂಡಳಿ ನಿರ್ಧರಿಸಿದ ಪರಿಣಾಮ ಇಂದು ಡಾ.ಶಿವಕುಮಾರ್ ಅವರು ನಂದಿನಿ ಹಾಲಿನ ರಾಯಭಾರಿಯಾಗಲು ತಮ್ಮ ಒಪ್ಪಿಗೆ ನೀಡಿದ್ದಾರೆ ಎಂದು ಕೆಎಂಎಫ್ ಮೂಲಗಳು ಸ್ಪಷ್ಟಪಡಿಸಿವೆ.
ಇನ್ನು, ನಂದಿನಿ ಹಾಲನ್ನು ಮತ್ತಷ್ಟು ಪ್ರೊಮೋಟ್ ಮಾಡಲು ನೆರವಾಗುವ ದೃಷ್ಟಿಯಿಂದ ರಾಯಭಾರಿಯಾಗುವಂತೆ ಕೆಎಂಎಫ್ ಮಾಡಿಕೊಂಡ ಮನವಿಗೆ ಸ್ಪಂದಿಸಿದ “ಕರುನಾಡ ಚಕ್ರವರ್ತಿ” ಶಿವರಾಜ್ ಕುಮಾರ್ ಅವರು, ಇಂದು ಕೆಎಂಎಫ್ ರಾಯಭಾರಿ ಪಟ್ಟವನ್ನು ಕರ್ನಾಟಕ ಹಾಲು ಒಕ್ಕೂಟ ಸಹಕಾರ ಮಹಾಮಂಡಳದ ಅಧ್ಯಕ್ಷ ಭೀಮಾ ನಾಯಕ್ ಅವರ ಸಮ್ಮುಖದಲ್ಲಿ ಸ್ವೀಕರಿಸಿದರು. ಅಂದಹಾಗೆ ಪುನೀತ್ ರಾಜ್ ಕುಮಾರ್ ಅವರಿಗೂ ಮುನ್ನ ನಂದಿನಿ ಹಾಲಿನ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದವರು ಪದ್ಮಭೂಷಣ ಡಾ.ರಾಜ್ ಕುಮಾರ್ ಅವರು ಅನ್ನೋದು ಬಹಳ ಮಂದಿಗೆ ತಿಳಿದಿರಲಿಕ್ಕಿಲ್ಲ.