ರಾಜ್ಯ ವಿಧಾನಮಂಡಲಅಧಿವೇಶನದಲ್ಲಿ ಇಂದು ಭಾರೀ ಚರ್ಚೆ ಹಾಗೂ ವಿರೋಧಗಳ ನಡುವೆ ವಿಧಾನಮಂಡಲದಲ್ಲಿ ಹಲವು ಪ್ರಮುಖ ವಿಧೇಯಕ ಮಂಡನೆಯಾಗಿದೆ.
ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ಭಾರೀ ಚರ್ಚೆ, ಆರೋಪ, ವಿರೋಧಗಳ ನಡುವೆ ಪ್ರಮುಖ ವಿಧೇಯಕಗಳನ್ನು ಮಂಡಿಸಲಾಗಿದೆ.
ಇನ್ನೂ, 2011 ರಲ್ಲಿ ತಿದ್ದುಪಡಿ ಮಾಡಿದ್ದ ಭೂಕಬಳಿಕೆ ನಿಷೇಧ ವಿಧೇಯಕವನ್ನು ಕಂದಾಯ ಸಚಿವ ಆರ್ ಅಶೋಕ್ ಮಂಡಿಸಿದರು. ಹಾಗೂ ವಿಧಾನಪರಿಷತ್ನಲ್ಲಿ ಗ್ರಾಮ ಸ್ವರಾಜ್ ಪಂಚಾಯತ್ ರಾಜ್ 2ನೇ ತಿದ್ದುಪಡಿ ವಿಧೇಯಕ ಅಂಗೀಕಾರಿಸಲಾಗಿದೆ. ಹಾಗೂ ಚರ್ಚೆ ಬಳಿಕ ಕರ್ನಾಟಕ ರೇಷ್ಮೆಹುಳು ಬಿತ್ತನೆ, ರೇಷ್ಮೆಗೂಡು ಮತ್ತು ರೇಷ್ಮೆ ನೂಲು ತಿದ್ದುಪಡಿ ವಿಧೇಯಕ 2022 ಮಂಡನೆ ಮಾಡಲಾಗಿದೆ.
ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಬಿಬಿಎಂಪಿ ತಿದ್ದುಪಡಿ ವಿಧೇಯಕವನ್ನು ಇಂದು ವಿಧಾನಪರಿಷತ್ನಲ್ಲಿ ಅಂಗೀಕರಿಸಲಾಗಿದೆ. ಚರ್ಚೆ ಬಳಿಕ ಕರ್ನಾಟಕ ಮುನಿಸಿಪಾಲಿಟಿಗಳ ತಿದ್ದುಪಡಿ ವಿಧೇಯಕ-2022 ಅಂಗೀಕರಿಸಲಾಯಿತು..