ಉಡುಪಿ, ಆ.4: ಇಲ್ಲಿನ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದ ವಿಡಿಯೋ ಪ್ರಕರಣದ ಸಂತ್ರಸ್ಥೆ ಹಿಂದೂ ವಿದ್ಯಾರ್ಥಿನಿ ಗುರುವಾರ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ ತನ್ನ ಹೇಳಿಕೆ ನೀಡಿದ್ದಾಳೆ.
ಜು.18ರಂದು ಆಕೆ ಕಾಲೇಜಿನ ಶೌಚಾಲಯದಲ್ಲಿದ್ದಾಗ 3 ಮಂದಿ ಮುಸ್ಲೀಂ ವಿದ್ಯಾರ್ಥಿನಿಯರು ಮೊಬೈಲಿನಲ್ಲಿ ಆಕೆಯ ಚಿತ್ರೀಕರಣ ನಡೆಸಿದ್ದರು. ನಂತರ ಅದು ವಿವಾದಕ್ಕೆ ಕಾರಣವಾಗಿದೆ.
ಅಂದು ನಡೆದ ಘಟನೆಯ ವಿವರಗಳನ್ನು ಆಕೆ ನ್ಯಾಯಾಲಯಕ್ಕೆ ಗುರುವಾರ ತಿಳಿಸಿದ್ದಾಳೆ. ನ್ಯಾಯಾಲಯ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಆದರೇ ಆಕೆ ಇದುವರೆಗೂ ದೂರು ನೀಡುವುದಕ್ಕೆ ಒಪ್ಪದೇ, ತನ್ನ ನಿರ್ಧಾರದಲ್ಲಿ ದೃಢವಾಗಿದ್ದಾಳೆ. ಪೊಲೀಸರು ಅನಿವಾರ್ಯವಾಗಿ ಸ್ವಯಂ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮೂವರು ಆರೋಪಿಗಳು ಬಂಧನದ ಬೀತಿಯಲ್ಲಿ ಈಗಾಗಲೇ ನ್ಯಾಯಾಲಯದಿಂದ ಷರತ್ತುಬದ್ದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.