ಉಡುಪಿ : ಸುಳ್ಳು ದೂರು ನೀಡಿ ಅನಗತ್ಯ ಕಿರುಕುಳ – ಪತ್ನಿ ವಿರುದ್ಧ ಶಿರ್ವ ಲೇಔಟ್ ನಲ್ಲಿರುವ ಪತಿಯ ಆರೋಪ

ಉಡುಪಿ : ಪ್ರೀತಿಸಿ ಮದುವೆಯಾದ ಪತ್ನಿ, ಮಗಳು ಮತ್ತು ಅಳಿಯನ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬರು, ತಾನು ನಿತ್ಯ ಅನುಭವಿಸುತ್ತಿದ್ದ ಹಿಂಸೆ, ಕಷ್ಟಗಳನ್ನು ಉಡುಪಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕಣ್ಣೀರು ಸುರಿಸಿಕೊಂಡೇ ಮಾತನಾಡಿದ ಸಂತ್ರಸ್ತ, ಶಿರ್ವ ಗ್ರೀನ್ ಲೇಔಟ್ ನಿವಾಸಿ ಸನಾವುಲ್ಲ ಅವರು, ತನಗೆ ಹೆಂಡತಿ, ಮಗಳು ಮತ್ತು ಅಳಿಯನಿಂದ ಆಗುತ್ತಿರುವ ಅನ್ಯಾಯವನ್ನು ತೋಡಿಕೊಂಡರು.
ಪತ್ನಿ ಅಮೀನಾ, ಮಗಳು ಮತ್ತು ಅಳಿಯ ತನ್ನ ವಿರುದ್ಧ ನಿರಂತರ ಸುಳ್ಳು ಕೇಸುಗಳನ್ನು ದಾಖಲಿಸಿ, ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಮೋಸ ಮಾಡಲು ಹಲವು ಕಾಗದ ಪತ್ರಗಳಿಗೆ ಸಹಿ ಹಾಕುವಂತೆ ಬೆದರಿಸಿದ್ದಾರೆ. ಸುಳ್ಳು ಕೇಸು ದಾಖಲಿಸಿ ಸಹಿ ಪಡೆದುಕೊಂಡಿದ್ದಾರೆ. ಮನೆಗೆ ಬಂದರೆ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ನಾನು ದುಡಿದು ಕಟ್ಟಿದ ಮನೆಯಲ್ಲಿ ನನ್ನ ಪತ್ನಿಗೆ ಹಕ್ಕಿಲ್ಲ ಎಂದು ದೂರಿದರು.
ಮಗಳ ಮದುವೆಗೆ ಮನೆ ಅಡವಿಟ್ಟು ನೀಡಿದ ಹಣ ವಾಪಸ್ ಕೇಳಿದ್ದಕ್ಕೆ ಎಲ್ಲಾ ಸೇರಿ ಹಲ್ಲೆ ನಡೆಸಿದ್ದಾರೆ. ಮನೆಯ ಸೊತ್ತುಗಳನ್ನು ಸಾಗಿಸುವುದನ್ನು ಪ್ರಶ್ನಿಸಿದ್ದಕ್ಕೆ ನನ್ನ ಹಾಗೂ ಕುಟುಂಬದವರ ವಿರುದ್ಧ ದೂರು ನೀಡಿದ್ದಾರೆ. ಮದುವೆಯಾಗಿ 30 ವರ್ಷಗಳ ಬಳಿಕ ವರದಕ್ಷಿಣೆ ಕಿರುಕುಳ ದೂರು ನೀಡಿ ಸತಾಯಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶೌಕತ್, ಅತ್ತೇರಿ, ಹಸೈನಾರ್ ಉಪಸ್ಥಿತರಿದ್ದರು.

You cannot copy content from Baravanige News

Scroll to Top