ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಥಾಯ್ಲೆಂಡ್ ಪ್ರವಾಸದಲ್ಲಿರುವಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಸದ್ಯ ವಿಜಯ್ ರಾಘವೇಂದ್ರ ಕುಟುಂಬ ಥಾಯ್ಲೆಂಡ್ ಗೆ ತೆರಳಿದೆ.
ಮರಣೋತ್ತರ ಪರೀಕ್ಷೆ ಅಲ್ಲಿಯೇ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಮಧ್ಯಾಹ್ನದ ವೇಳೆ ಸ್ಪಂದನಾ ಮೃತದೇಹ ಕುಟುಂಬಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ. ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಮೃತದೇಹ ವಿಜಯ್ ರಾಘವೇಂದ್ರ ಕುಟುಂಬಕ್ಕೆ ನಿಡಲಾಗುತ್ತದೆ.
ಇಂದು ಸಂಜೆ ಸುಮಾರು 7 ಗಂಟೆಗೆ ಥಾಯ್ಲೆಂಡ್ ನಿಂದ ಪಾರ್ಥವ ಶರೀರ ಬೆಂಗಳೂರಿಗೆ ರವಾನಿಸಲಾಗುವುದು. ರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರು ತಲುಪುವ ನಿರೀಕ್ಷೆ ಇದೆ.
ನಾಳೆ (ಆಗಸ್ಟ್ 9) ಮಧ್ಯಾಹ್ನ ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನಾ ಅಂತ್ಯಕ್ರಿಯೆ ನಡೆಯಲಿದೆ. ಸ್ಪಂದನಾ ಅವರ ತಂದೆ ಬಿ.ಕೆ.ಶಿವರಾಂ ಮನೆಯಲ್ಲಿ ನಾಳೆ ಮಧ್ಯಾಹ್ನದವರೆಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.