ಪಂಚಭೂತಗಳಲ್ಲಿ ಲೀನವಾದ ‘ಚಿನ್ನಾರಿ ಮುತ್ತನ’ ಪ್ರೀತಿಯ ಮಡದಿ

ಬೆಂಗಳೂರು: ಇಂದು ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಮಲ್ಲೇಶ್ವರಂ ಸಮೀಪವಿರೋ ಹರಿಶ್ಚಂದ್ರ ಘಾಟ್‌ ಚಿತಾಗಾರದಲ್ಲಿ ಈಡಿಗ ಸಂಪ್ರದಾಯದ ವಿಧಿ ವಿಧಾನಗಳ ಪ್ರಕಾರ ಸ್ಪಂದನಾ ಅಂತ್ಯಸಂಸ್ಕಾರ ನಡೆಸಲಾಗಿದೆ.

ಇನ್ನು, ಸ್ಪಂದನಾ ಅಂತ್ಯಕ್ರಿಯೆಯಲ್ಲಿ ಡಾ. ರಾಜಕುಮಾರ್ ಮತ್ತು ಬಿಕೆ ಶಿವರಾಂ ಕುಟುಂಬಸ್ಥರು ಭಾಗಿಯಾಗಿದ್ದರು. ಕನ್ನಡ ಚಿತ್ರರಂಗದ ನಟ- ನಟಿಯರು, ನಿರ್ದೇಶಕರು, ನಿರ್ಮಾಪಕರು, ಸಹ ಕಲಾವಿದರು, ತಂತ್ರಜ್ಞರು ಸೇರಿದಂತೆ ಇಡೀ ಸ್ಯಾಂಡಲ್‌ವುಡ್‌ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಕಂಬನಿ ಮಿಡಿದಿದೆ.

ವಿದೇಶದಲ್ಲಿ ಜೀವ ಕಳೆದುಕೊಂಡಿದ್ದ ಸ್ಪಂದನಾ ಮೃತದೇಹವನ್ನು ನಿನ್ನೆ ರಾತ್ರಿಯಷ್ಟೇ ಬ್ಯಾಂಕಾಕ್ನಿಂದ ಬೆಂಗಳೂರಿಗೆ ತರಲಾಗಿತ್ತು. ಮೃತದೇಹವನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಮಲ್ಲೇಶ್ವರಂನ ಸ್ಪಂದನಾ ತವರು ಮನೆಗೆ ತೆಗೆದಕೊಂಡು ಹೋಗಲಾಗಿತ್ತು. ಇಂದು ಮಧ್ಯಾಹ್ನದವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಪತ್ನಿಯನ್ನು ಕಳೆದುಕೊಂಡು ನಟ ವಿಜಯ ರಾಘವೇಂದ್ರ ಆಘಾತಕ್ಕೆ ಒಳಗಾಗಿದ್ದಾರೆ. ಅತ್ತಿಗೆ ಅಕಾಲಿಕ ನಿಧನಕ್ಕೆ ನಟ ಶ್ರೀಮುರಳಿ ಸೇರಿದಂತೆ ಇಡೀ ಕುಟುಂಬ ಕಣ್ಣೀರಿಟ್ಟಿದೆ. ಮನೆ ಮಗಳನ್ನು ಕಳೆದುಕೊಂಡ ದುಃಖದಲ್ಲಿ ದೊಡ್ಮನೆ, ಬಿಕೆ ಶಿವರಾಂ, ಬಿಕೆ ಹರಿಪ್ರಸಾದ್ ಕುಟುಂಬ ಮುಳುಗಿದೆ.

You cannot copy content from Baravanige News

Scroll to Top