ಇತ್ತೀಚಿಗೆ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಲೇ ಇದೆ. ಚಿಕ್ಕ ವಯಸ್ಸಿನಲ್ಲೇ ಅನೇಕರು ಹಾರ್ಟ್ ಅಟ್ಯಾಕ್ಗೆ ಒಳಗಾಗಿ ಸಾವನ್ನಪ್ಪುತ್ತಿದ್ದಾರೆ. ಈ ಸಾಲಿಗೆ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಕೂಡ ಸೇರಿದ್ದಾರೆ. ನಟ ಪುನೀತ್ ರಾಜ್ಕುಮಾರ್ ಕೂಡ ಹೃದಯಘಾತದಿಂದ ಸಾವನ್ನಪ್ಪಿದ್ರು. ಇದೀಗ ಮತ್ತೊಂದು ಆಘಾತದ ಸುದ್ದಿ ಸ್ಯಾಂಡಲ್ವುಡ್ನನ್ನು ಬೆಚ್ಚಿಬೀಳಿಸಿದೆ. 39ನೇ ವಯಸ್ಸಿಗೆ ಸ್ಪಂದನಾ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಸ್ಪಂದನಾ ಸಾವಿಗೆ ಕಾರಣವೇನು ಎನ್ನುವ ಚರ್ಚೆ ಜೋರಾಗಿದೆ.
ಹೌದು.. ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾಗೆ ಬ್ಯಾಂಕಾಕ್‌ನಲ್ಲಿ ಹೃದಯಘಾತವಾಗಿದ್ದು, ಅಲ್ಲೇ ನಿಧನರಾಗಿದ್ದಾರೆ. ಲಾಕ್ ಡೌನ್ ಟೈಮ್ನಲ್ಲಿ ದಪ್ಪ ಆಗಿದ್ದ ಸ್ಪಂದನಾ ತೂಕ ಇಳಿಸಲು ಹರಸಾಹಸ ಪಡುತ್ತಿದ್ರು ಎನ್ನಲಾಗ್ತಿದೆ. ಇತ್ತೀಚಿಗೆ ಸ್ಪಂದನಾ ದಿಡೀರ್ ಅಂತ 16 ಕೆಜಿ ತೂಕ ಇಳಿಸಿಕೊಂಡಿದ್ದರಂತೆ.
ಸ್ಪಂದನಾ ಪ್ರತಿದಿನ ಜಿಮ್, ಡಯೆಟ್ ಮಾಡಿ ತೂಕವನ್ನು ಇಳಿಸಿಕೊಂಡಿದ್ದರಂತೆ. ಹಾಗಾಗಿ ಇದರಿಂದಲೇ ಅವರಿಗೆ ಹೃದಯಾಘಾತವಾಗಿತಾ ಎನ್ನುವ ಪ್ರಶ್ನೆ ಇದೀಗ ಮೂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದ್ದಿ ಹರಿದಾಡುತ್ತಿದ್ದು,ಕನ್ನಡ ಚಲನಚಿತ್ರ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಸಾವಿನ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ನಟಿ ಮೇಘನಾ ರಾಜ್ ಮನವಿ ಮಾಡಿಕೊಂಡಿದ್ದಾರೆ.
ಸ್ಪಂದನಾ ಅಂತಿಮ ದರ್ಶನದಲ್ಲಿ ಪಾಲ್ಗೊಂಡು ಮಾಧ್ಯಮದ ಎದುರು ಮಾತಾನಾಡಿದ ಮೇಘನಾ ರಾಜ್, ರಾಘವೇಂದ್ರ ಮತ್ತು ಸ್ಪಂದನಾ ಇಬ್ಬರೂ ನಮಗೆ ಬಹಳ ಆತ್ಮೀಯರಾಗಿದ್ದರು. ಏನು ನಡೆದಿದೆ, ಏನು ಆಗಿದೆ ಅನ್ನೋದು ಅವರ ಕುಟುಂಬಕ್ಕೆ ಮತ್ತು ವೈದ್ಯರಿಗೆ ತಿಳಿದಿರುತ್ತದೆ. ನೀವೇ ಡಯೆಟಿಷಿಯನ್ ಆಗಬೇಡಿ, ಡಾಕ್ಟರ್ಸ್, ಫಿಟ್‌ನೆಸ್ ಟ್ರೇನರ್ಸ್ ಆಗಬೇಡಿ. ಏನೇನೋ ಅಪಪ್ರಚಾರ ಮಾಡಬೇಡಿ. ಸೋಶಿಯಲ್ ಮೀಡಿಯಾದಲ್ಲಿ ಏನೇನೋ ಹೇಳಬೇಡಿ.
ಆಕೆಗೆ ಮರ್ಯಾದೆ ಕೊಟ್ಟು ಆಕೆ ಆತ್ಮಕ್ಕೆ ಶಾಂತಿ ಸಿಗುವಂತೆ ನೋಡಿಕೊಳ್ಳಿ, ಕುಟುಂಬಸ್ಥರಿಗೆ ನೋವು ಕಡಿಮೆಯಾಗಲು ಸಮಯ ಕೊಡಿ, ಅವರಿಗೆ ಸ್ವಲ್ಪ ಸ್ಪೇಸ್ ಕೊಡಿ. ನಾವಿರುವಂತಹ ಪರಿಸ್ಥಿತಿಯಲ್ಲಿ ಇನ್ನೊಂದು ಕುಟುಂಬವನ್ನು ನೋಡೋಕೆ ಆಗಲ್ಲ. ರಾಘು, ಸ್ಪಂದನಾ ನಮ್ಮ ಕುಟುಂಬದವರು. ನಮ್ಮ ಕುಟುಂಬಕ್ಕೆ ಮತ್ತೆ ಹೀಗೆ ಆಗಿದೆ” ಎಂದು ಮನವಿ ಮಾಡಿಕೊಂಡಿದ್ದಾರೆ.