ಕಿನ್ನಿಗೋಳಿ: ಕಾರಿಗೆ ಟಿಪ್ಪರ್ ಡಿಕ್ಕಿ; ಓರ್ವ ಸಾವು, ನಾಲ್ವರು ಗಂಭೀರ..!!

ಕಾರ್ಕಳ, ಆ.09: ಕಿನ್ನಿಗೋಳಿ ಸಮೀಪ ಮೂರುಕಾವೇರಿ ಎಂಬಲ್ಲಿ ಆಕ್ಟೋ ಕಾರು ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ಐವರು ಪ್ರಯಾಣಿಕರೂ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬೆಳ್ಳಾಯಿಯ ಮಾರ್ನಾಡು ರಾಮಣ್ಣ ಆಚಾರ್ಯ (45) ಮೃತ ದುರ್ದೈವಿ.

ಗಾಯಗೊಂಡವರು ಸುರತ್ಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂಡಬಿದ್ರೆ ಕಡೆಯಿಂದ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಮೂರುಕಾವೇರಿ ಸಮೀಪದ ಮಹಮ್ಮಾಯಿ ದೇವಸ್ಥಾನದ ಬಳಿ ಕಾರ್ ಗೆ ಡಿಕ್ಕಿ ಹೊಡೆದಿದೆ.

ಮೂಲ್ಕಿಯಲ್ಲಿ ಮರದ ಕೆಲಸ ಮುಗಿಸಿಕೊಂಡು ಮರಳಿ ಮನೆಗೆ ಬರುತ್ತಿದ್ದ ವೇಳೆ ಮೂರುಕಾವೇರಿ ಎಂಬಲ್ಲಿ ದುರಂತ ಸಂಭವಿಸಿದೆ.

ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Scroll to Top