ಮಲ್ಪೆ ಬಂದರಿನ ನೀರಿಗೆ ಬಿದ್ದ 1.5 ಲಕ್ಷದ ಐಫೋನ್ : ಹುಡುಕಿಕೊಟ್ಟ ಮುಳುಗುತಜ್ಞ ಈಶ್ವರ್ ಮಲ್ಪೆ

ಉಡುಪಿ: ಉಡುಪಿಯ ಮಲ್ಪೆ ಮೀನುಗಾರಿಕೆ ಬಂದರಿನ ಬೇಸಿನ್‌ನಲ್ಲಿ ಹೂಳು ತುಂಬಿಕೊಂಡಿದ್ದು ಕಾಲು ಜಾರಿ ಬಿದ್ದ ಮನುಷ್ಯನ ಮೃತದೇಹವೂ ಸಿಗುವುದು ಕಷ್ಟ.ಅಂಥದ್ದರಲ್ಲಿ ಮುಳುಗುತಜ್ಞ ಈಶ್ವರ್ ಮಲ್ಪೆ ಅವರು ಅಂತಹ ಅಪಾಯಕಾರಿ ಬೇಸಿನ್‌ಗೆ ಧುಮುಕಿ 1.5 ಲಕ್ಷ ರೂಪಾಯಿ ಮೌಲ್ಯದ ಐ – ಫೋನ್ ಮೊಬೈಲ್ ಹುಡುಕಿ ಮೇಲೆ ತಂದಿದ್ದಾರೆ.



ಇಂದು ಬೆಳಗ್ಗೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ವ್ಯಾಪಾರಿಯೊಬ್ಬರ ಐ-ಫೋನ್ ಮೊಬೈಲ್ ಜೆಟ್ಟಿ ಬಳಿ ಬೇಸಿನ್‌ ನ ನೀರಿಗೆ ಬಿದ್ದಿತ್ತು.

ಮೊಬೈಲ್ ಕಳೆದುಕೊಂಡು ಚಿಂತಿತರಾದ ಅವರು ಪರಿಚಿತರೊಬ್ಬರ ಸಹಾಯದಿಂದ ಈಶ್ವರ್ ಮಲ್ಪೆ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.



ತತ್‌ಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಈಶ್ವರ್ ಮಲ್ಪೆ ನೀರಿನ ಆಳದಲ್ಲಿ ಹುಡುಕಾಟ ನಡೆಸಿ ಪತ್ತೆಹಚ್ಚಿ ಮೊಬೈಲ್‌ನ್ನು ಹೊರತೆಗೆದು ವಾರಸುದಾರರಿಗೆ ನೀಡಿದರು.

ನೆರೆದಿದ್ದ ಜನ ಈಶ್ವರ್ ಅವರ ಚಾಕಚಕ್ಯತೆಯನ್ನು ಕೊಂಡಾಡಿದರು.

Scroll to Top