ನವದೆಹಲಿ, ಆ 11: ಗೂಗಲ್ ಕ್ರೋಮ್ ಡೆಸ್ಕ್‌ಟಾಪ್ ಬಳಕೆದಾರರಿಗೆ ಭಾರತದ ಸರ್ಕಾರದ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-IN) ಎಚ್ಚರಿಕೆ ನೀಡಿದೆ.
ಗೂಗಲ್ ಕ್ರೋಮ್ ನಿರ್ದಿಷ್ಟ ಅವೃತ್ತಿಗಳಲ್ಲಿ ದೋಷಗಳನ್ನು ಪತ್ತೆ ಹಚ್ಚಿರುವ ತಂಡ ಇದರಿಂದ ಸಂಭಾವ್ಯ ಭದ್ರತಾ ಅಪಾಯದ ಬಳಕೆ ಬಗ್ಗೆ ಬಳಕೆದಾರರಿಗೆ ಎಚ್ಚರಿಸಿದೆ.
ಡೇಟಾವನ್ನು ಕದಿಯಲು ವಿನ್ಯಾಸಗೊಳಿಸಲಾದ ಫಿಶಿಂಗ್ ಸೈಟ್‌ನಿಂದ ಮಾಲ್‌ವೇರ್ ವೈರಸ್ ದಾಳಿ ನಡೆಯಬಹುದು ಹೀಗಾಗಿ ಅಗತ್ಯ ಅಪ್ಡೇಟ್ ಮಾಡಿಕೊಳ್ಳಬೇಕು ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಸೂಚಿಸಿದೆ.