ಉಡುಪಿ, ಆ.14: ಓದುವಂತೆ ತಂದೆ ಒತ್ತಾಯಿಸಿದ್ದಕ್ಕೆ ನೊಂದುಕೊಂಡ ಪುತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
76 ಬಡಗಬೆಟ್ಟುವಿನ ಕಿರಣ್ ಬಾಳಿಗ ಅವರ ಪುತ್ರಿ ಅಂಕಿತಾ ಕೆ.ಬಾಳಿಗ(21) ಆತ್ಮಹತ್ಯೆ ಮಾಡಿಕೊಂಡವರು.
ಇವರು ಮಣಿಪಾಲದ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್‌ಸಿ ಮಾಡಿಕೊಂಡಿದ್ದಳು. ತಂದೆ ಓದಿನ ವಿಚಾರಕ್ಕೆ ಬೈದ ಕಾರಣವೋ ಅಥವಾ ಇನ್ನಾವೊದೋ ಕಾರಣದಿಂದ ಆಕೆ ಆ.13ರಂದು ಮನೆಯ ರೂಮ್‌ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.