ಉಡುಪಿ, ಆ.15: ಅಖಂಡ ಭಾರತ ಸಂಕಲ್ಪ ದಿನ ಪ್ರಯುಕ್ತ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾ ವಾಹಿನಿ ವಿಷ್ಣು ವಲ್ಲಭ ಘಟಕ ಇನ್ನೆಂಜೆ ಕಾಪು ಪ್ರಖಂಡ ವತಿಯಿಂದ ಉಡುಪಿಯ ಕಟಪಾಡಿಯಲ್ಲಿ ಆ.14 ರಂದು ಪಂಜಿನ ಮೆರವಣಿಗೆ ನಡೆಯಿತು.
ಕಟಪಾಡಿಯ ಮೆರವಣಿಗೆ ಶಂಕರಪುರ ಶ್ರೀ ಬಬ್ಬು ಸ್ವಾಮಿ ದೇವಸ್ಥಾನದಿಂದ ಉಂಡಾರು ವಿಷ್ಣುಮೂರ್ತಿ ದೇವಸ್ಥಾನದವರೆಗೆ ದೊಂದಿಯೊಂದಿಗೆ ಸಾಗಿ ಬಂದ ಕಾಲ್ನಾಡಿಗೆ ಜಾಥದಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಈ ಸಂದರ್ಭ ಹಿಂದೂ ಮುಖಂಡರು ಉಪಸ್ಥಿತರಿದ್ದರು.