ಮುಲ್ಕಿ,, ಆ.15: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ ನಿಲ್ದಾಣದ ಬಳಿ ಅಪಘಾತ ತಡೆಗೆ ಇರಿಸಿದ್ದ ಬ್ಯಾರಿ ಕೇಡ್ ಗೆ ಬೈಕ್ ಢಿಕ್ಕಿಯಾಗಿ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗಾಯಾಳುಗಳನ್ನು ತಲಪಾಡಿ ಕಣ್ವ ತೀರ್ಥ ನಿವಾಸಿಗಳಾದ ರಮೇಶ್ (48), ಸಿರಿಲ್ ಡಿಸೋಜಾ (60) ಎಂದು ಗುರುತಿಸಲಾಗಿದೆ.
ಗಾಯಾಳು ಬೈಕ್ ಸವಾರರು ಉಡುಪಿ ಕಡೆಯಿಂದ ಸ್ಕೂಟರ್ ನಲ್ಲಿ ತಲಪಾಡಿ ಕಡೆಗೆ ತೆರಳುತ್ತಿದ್ದು, ಮುಲ್ಕಿ ಬಸ್ ನಿಲ್ದಾಣದ ಬಳಿ ಸ್ಕೂಟರ್ ಸವಾರನ ತಪ್ಪಿ ಸಿನಿಮೀಯ ಮಾದರಿಯಲ್ಲಿ ಅಪಘಾತ ತಡೆಗೆ ಇರಿಸಿದ್ದ ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದಿದೆ.
ಈ ಸಂದರ್ಭ ಬ್ಯಾರಿ ಕೇಡ್ ಎಸೆಯಲ್ಪಟ್ಟು ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರಿನ ಎದುರು ಭಾಗದ ಮೇಲ್ಗಡೆ ಬಿದ್ದು ಕಾರಿಗೆ ಹಾನಿಯಾಗಿದೆ.