ಇತ್ತೀಚಿಗೆ ಮಳೆ ಜಾಸ್ತಿ ಆಯ್ತು ಅನ್ನುವ ಕಾರಣಕ್ಕೆ ಶಾಲೆಗಳಿಗೆ ರಜೆ ಕೊಟ್ಟಿದ್ದು ಮಾತ್ರವಲ್ಲ ಮಕ್ಕಳಿಗೆ ಹರಡುತ್ತಿರುವ ಕೆಂಪು ಕಣ್ಣು ಅಥವಾ ಕಾಂಜಂಕ್ಟಿವಿಸ್ ಕಾರಣದಿಂದಾಗಿ ಮಕ್ಕಳು ಶಾಲೆಗೆ ರಜಾ ಹಾಕುವಂತೆ ಆಗಿದೆ. ಮಕ್ಕಳಲ್ಲಿ ಐ ಫ್ಲೂ ಅಥವಾ ಪಿಂಕ್ ಐ ಕಾಣಿಸಿಕೊಂಡರೆ ಪಾಲಕರಿಗೆ ಟೆನ್ಶನ್ ಆಗುವುದು ಸಹಜ. ಯಾಕೆಂದ್ರೆ ಇದರಿಂದ ಕಣ್ಣು ತೆರೆಯಲು ಸಾಧ್ಯವಿಲ್ಲ ಅಷ್ಟರಮಟ್ಟಿಗೆ ಕಣ್ಣಿನಲ್ಲಿ ಸಮಸ್ಯೆ ಉಂಟಾಗುತ್ತದೆ.
ಹೌದು ಮಗುವನ್ನು ಬೆಳಿಗ್ಗೆ ಶಾಲೆಗೆ ಕಳಿಸುವುದಕ್ಕೆ ನೀವು ಎಬ್ಬಿಸಿದರೆ ಮಗು ಎದ್ದೇಳುವುದು ಇರಲಿ ಕಣ್ಣು ಬಿಡುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ. ಕಣ್ಣಿನ ರೆಪ್ಪೆಗಳು ಹೊಂದಿಕೊಂಡಂತೆ ಇರುತ್ತವೆ. ಹೇಗೋ ನೀವು ಅದನ್ನ ಸ್ವಚ್ಛಗೊಳಿಸಿ ಕಂಡು ಬಿಡುವಂತೆ ಮಾಡಿದರೆ ಕಣ್ಣು ಬಿಡಲು ಸಾಧ್ಯವಾಗುವುದಿಲ್ಲ ಯಾಕೆಂದರೆ ಅಷ್ಟರ ಮಟ್ಟಿಗೆ ಉರಿ ಕೂಡ ಇರುತ್ತೆ ಕಣ್ಣು ಸಂಪೂರ್ಣವಾಗಿ ಕೆಂಪು ಬಣ್ಣಕ್ಕೆ ತಿರುಗಿರುತ್ತೆ ಇದನ್ನು ಐ ಪ್ಲೂ ಕರೆಯುತ್ತಾರೆ. ಇದು ಮರಣಾಂತಿಕ ಕಾಯಿಲೆ ಏನು ಅಲ್ಲ ಒಮ್ಮೆ ಬಂದು ಕೆಲವು ದಿನಗಳಲ್ಲಿ ಹೋಗುವಂತದ್ದು ಆದರೆ ಎಷ್ಟು ಬೇಗ ನನ್ನ ಮಕ್ಕಳು ಹುಷಾರಾಗುತ್ತಾರೆ ಅಂತ ಪಾಲಕರಲ್ಲಿ ಯೋಚನೆ ಇದ್ರೆ ಅದಕ್ಕೆ ಉತ್ತರ ಇಲ್ಲಿದೆ.
ಕಾಂಜಂಕ್ಟಿವಿಸ್ ಎಂದರೇನು ಇದನ್ನು ಪಿಂಕ್ ಐ ಎಂದೂ ಕರೆಯುತ್ತಾರೆ. ಇದೊಂದು ಕಣ್ಣಿಗೆ ತಗಲುವಂತಹ ಸೋಂಕು ಅಥವಾ ಉರಿಯೂತವಾಗಿದೆ. ಕಣ್ಣಿನ ಬಿಳಿ ಭಾಗವನ್ನು ಆವರಿಸಿಕೊಳ್ಳುವ ವೈರಸ್ ಎನ್ನಬಹುದು. ಇದು ಕಣ್ಣು ರೆಪ್ಪೆಯನ್ನು ಹಾಗೂ ಕಣ್ಣಿನ ಬಿಳಿ ಭಾಗವನ್ನು ಆವರಿಸಿಕೊಳ್ಳುತ್ತದೆ. ಕಣ್ಣಿಗೆ ಈ ಸೋಂಕು ತಗುಲಿದರೆ ಒಂದಷ್ಟು ಸಮಯ ಬಹಳ ನೋವನ್ನು ಅನುಭವಿಸಬೇಕು ಅದರಲ್ಲೂ ಮಕ್ಕಳಲ್ಲಿ ಈ ಕಣ್ಣಿನ ಸೋಂಕು ತಗುಲಿದ್ರೆ ಹೆಚ್ಚು ನೋವು ಅನುಭವಿಸಬೇಕಾಗುತ್ತದೆ. ಬ್ಯಾಕ್ಟೀರಿಯಾ ವೈರಸ್ ಸೇರಿದಂತೆ ಬೇರೆ ಬೇರೆ ರೀತಿಯ ಪಿಂಕ್ ಐ ಬರುವ ಸಾಧ್ಯತೆ ಇರುತ್ತದೆ. ಹಾಗೂ ಸಾಂಕ್ರಾಮಿಕವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.

ಪಿಂಕ್ ಐ ಎನ್ನುವುದು ಬೇರೆ ಬೇರೆ ಬ್ಯಾಕ್ಟೀರಿಯಾದಿಂದ ಹಾಗೂ ವೈರಸ್ ನಿಂದ ಉಂಟಾಗಬಹುದು. ಅದೇ ರೀತಿ ಪಿಂಕ್ ಐ ಉಂಟಾಗಲು ಕಾರಣವಾಗಿರುವ ವೈರಸ್ ಹಾಗೂ ಬ್ಯಾಕ್ಟೀರಿಯಾಗಳ ಪರಿಣಾಮಗಳು ಕೂಡ ಬೇರೆ ಬೇರೆ ಆಗಿರುತ್ತದೆ. ಆದರೆ ಈ ಸೋಂಕು ಅಸಮಾನ್ಯವೇನು ಅಲ್ಲ. ಬ್ಯಾಕ್ಟೀರಿಯಾದಿಂದ ಕಣ್ಣಿನಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ ಕಣ್ಣಿನಲ್ಲಿ ದಪ್ಪವಾಗಿರುವ ಟಿಶ್ಯೂ ಅಥವಾ ಬಿಳಿಯ ಬಣ್ಣದ ವಸ್ತು ಹೊರಗೆ ಬರುತ್ತದೆ. ಇದರಿಂದ ಕಿರಿಕಿರಿ ಉಂಟಾಗುವುದು ಹೆಚ್ಚು ಕಣ್ಣಿಗೆ ಬ್ಲೂ ಅಥವಾ ಪಿಂಕ್ ಬಂದಿದೆ ಎಂದು ತಿಳಿದುಕೊಳ್ಳುವುದು ಹೇಗೆ? ಅದರ ಲಕ್ಷಣಗಳು ಇಲ್ಲಿವೆ…
ಕಣ್ಣುಗಳು ಕೆಂಪಾಗುವುದು ಕಣ್ಣುಗಳನ್ನು ತೆರೆಯಲು ಕೂಡ ಸಾಧ್ಯವಾಗದೇ ಇರುವುದು ದಪ್ಪವಾಗಿರುವ ಟಿಶ್ಯೂ ಹೊರಗೆ ಬರುವುದು ಕಣ್ಣಿನ ಊತ ನೀರು ಹೊರಗೆ ಬರುವುದು ಕಣ್ಣುಗಳಲ್ಲಿ ತುರಿಕೆ ಉಂಟಾಗುವುದು ಕಣ್ಣು ತೆರೆಯಲು ಸಾಧ್ಯವಾಗದೆ ಸರಿಯಾಗಿ ಯಾವ ವಸ್ತುವು ಕಾಣದೆ ಇರುವುದು. ಇನ್ನು ಕಣ್ಣಿನ ಸೋಂಕು ಕಾಣಿಸಿಕೊಂಡಾಗ ಕೆಲವರಿಗೆ ನೆಗಡಿ ಕೆಮ್ಮು ಕೂಡ ಉಂಟಾಗಬಹುದು.

ಪಿಂಕ್ ಐ ಗೆ ಇದೆಯಾ ಚಿಕಿತ್ಸೆ ಪಿಂಕ್ ಐ ಅಥವಾ ಕಣ್ಣಿನ ಸೋಂಕು ಎನ್ನುವುದು ಮಕ್ಕಳಲ್ಲಿ ಮಾತ್ರವಲ್ಲ ಯಾವ ವಯಸ್ಸಿನವರಲ್ಲಿಯೂ ಕೂಡ ಕಾಣಿಸಿಕೊಳ್ಳಬಹುದು ಆದರೆ ಮಕ್ಕಳಿಗೆ ಕಣ್ಣಿನ ಸೋಂಕು ಉಂಟಾದರೆ ಅವರಿಗೆ ತಡೆದುಕೊಳ್ಳುವುದಕ್ಕೆ ಸ್ವಲ್ಪ ಕಷ್ಟವಾಗಬಹುದು. ಇನ್ನು ಇದಕ್ಕೆ ಚಿಕಿತ್ಸೆ ಏನು ಎಂದು ಕೇಳುವುದಾದರೆ, ವೈದ್ಯರ ಚಿಕಿತ್ಸೆಗಿಂತಲೂ ಪೋಷಕರ ಆರೈಕೆ ಬಹಳ ಮುಖ್ಯವಾಗಿರುತ್ತದೆ.
ಒದ್ದೆಯಾದ ಹತ್ತಿ ಉಂಡೆಯಿಂದ ಕಣ್ಣುಗಳನ್ನ ಮೃದುವಾಗಿ ಸ್ವಚ್ಛಗೊಳಿಸಬೇಕು ಕ್ಲೀನಾಗಿರುವ ಬಟ್ಟೆಯನ್ನು ಬಳಸಬೇಕು. ಇನ್ನು ವೈದ್ಯರು ತಿಳಿಸಿರುವ ಕಣ್ಣಿನ ಡ್ರಾಪ್ಸ್ ಅಥವಾ ಮುಲಾಮು ಕೂಡ ಹಚ್ಚಬಹುದು. ಈ ಸಮಯದಲ್ಲಿ ಕಣ್ಣು ಹೆಚ್ಚು ಉರಿ ಯಾಗುತ್ತದೆ. ಹಾಗಾಗಿ ಕಣ್ಣನ್ನು ತಂಪಾಗಿ ಇಡುವುದು ಬಹಳ ಮುಖ್ಯ ಕಣ್ಣಿನ ಫ್ಲೂ ಕಾಣಿಸಿಕೊಂಡಾಗ ಕೆಲವು ಮನೆಮದ್ದುಗಳನ್ನು ಮಾಡಬಹುದು.
ಕೊತ್ತಂಬರಿ ಬೀಜ ಅಥವಾ ಮೆಂತ್ಯ ಬೀಜವನ್ನು ನೀರಿನಲ್ಲಿ ನೆನೆ ಹಾಕಿ ಆ ನೀರಿನಲ್ಲಿ ತೆಳ್ಳಗಿರುವ ಕಾಟನ್ ಬಟ್ಟೆ ಅಥವಾ ಕಾಟನ್ ಉಂಡೆಗಳನ್ನು ಅದ್ದಿ ಮೃದುವಾಗಿ ಕಣ್ಣಿಗೆ ಮಸಾಜ್ ಮಾಡಬೇಕು. ಈ ರೀತಿ ಮಾಡುವುದರಿಂದ ಕಣ್ಣಿನ ಉರಿ ಕಡಿಮೆ ಆಗುತ್ತದೆ. ಕಣ್ಣು ದಪ್ಪವಾಗಿರುವುದು ಕೂಡ ನಿಧಾನಕ್ಕೆ ಕಡಿಮೆಯಾಗುತ್ತಾ ಬರುತ್ತದೆ. ಕಣ್ಣಿನ ಸೋಂಕು ಕಾಣಿಸಿಕೊಂಡಾಗ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಅದು ಕೆಲವು ದಿನಗಳಲ್ಲಿ ತನ್ನಿಂದ ತಾನಾಗಿಯೇ ಗುಣವಾಗುತ್ತಾ ಬರುತ್ತದೆ.

ಇದು ಆರಂಭವಾಗುವುದಕ್ಕೂ ಮೊದಲು ಕಣ್ಣಿನಲ್ಲಿ ತುರಿಕೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಈ ರೀತಿ ಆದಾಗ ತಕ್ಷಣ ಕಣ್ಣಿಗೆ ಡ್ರಾಪ್ ಹಾಕಿಸಬಹುದು ಇನ್ನು ಕಣ್ಣಿಗೆ ಉಂಟಾಗುವ ಈ ಸೋಂಕು ಐದರಿಂದ ಏಳು ದಿನದವರೆಗೂ ಇರಬಹುದು.
ಮಕ್ಕಳು ಪಿಂಕ್ ಐ ಗೆ ಒಳಗಾದರೆ ಅವರನ್ನು ಶಾಲೆಗೆ ಕಳುಹಿಸದೆ ಮನೆಯಲ್ಲೇ ಇರಿಸಿಕೊಳ್ಳುವುದು ಬಹಳ ಉತ್ತಮ ಯಾಕೆಂದರೆ ಈ ಸೋಂಕು ಬಹಳ ತ್ವರಿತವಾಗಿ ಬೇರೆಯವರಿಗೂ ಕೂಡ ಹಬ್ಬುತ್ತದೆ. ಯಾರು ಮಕ್ಕಳೊಂದಿಗೆ ನಿಕಟ ಸಂಪರ್ಕದಲ್ಲಿ ಇರುತ್ತಾರೋ ಅವರಿಗೂ ಕೂಡ ಈ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಸುಮಾರು ಐದು ದಿನಗಳು ಅಥವಾ ಒಂದು ವಾರಗಳ ನಂತರ ಮಕ್ಕಳನ್ನು ಮರಳಿ ಶಾಲೆಗೆ ಕಳುಹಿಸಿದರೆ ಕಣ್ಣಿನಲ್ಲಿ ಸ್ಪ್ರೆಡ್ ಆಗುವಂತಹ ವೈರಸ್ ಗಳು ಸಂಪೂರ್ಣ ನಾಶವಾಗಿರುತ್ತದೆ. ಇನ್ನು ಶಾಲೆಯಲ್ಲಿಯೂ ಕೂಡ ಮಗುವಿನಲ್ಲಿ ಇಂತಹ ಲಕ್ಷಣಗಳು ಕಂಡು ಬಂದರೆ ಕಣ್ಣು ಕೆಂಪಾದಂತೆ ಕಾಣಿಸಿದರೆ ತಕ್ಷಣವೇ ಅವರನ್ನು ಮನೆಗೆ ಕಳುಹಿಸಬೇಕು ಹಾಗೂ ಇತರ ಮಕ್ಕಳು ಕೂಡ ಜಾಗೃತೆಯಿಂದ ಇರುವಂತೆ ನೋಡಿಕೊಳ್ಳಬೇಕು. ಒಟ್ಟಿನಲ್ಲಿ ಹೇಳುವುದಾದರೆ ಕಣ್ಣಿನ ಸೋಂಕು ಅಥವಾ ಪಿಂಕ್ ಐ ಎನ್ನುವುದು ಬಹಳ ದೊಡ್ಡ ಕಾಯಿಲೆ ಏನು ಅಲ್ಲ ಇದು ಬಹಳ ಸಾಮಾನ್ಯವಾಗಿರುವ ವಿಷಯವೇ. ಕೆಲವು ದಿನಗಳ ಮಟ್ಟಿಗೆ ಕಣ್ಣಿನಲ್ಲಿ ಕಾಣಿಸಿಕೊಳ್ಳುವ ಈ ಉರಿ ಮಕ್ಕಳಿಂದ ಸಹಿಸುವುದು ಅಸಾಧ್ಯ. ಆದಕಾರಣ ಕಣ್ಣಿನ ಸೋಂಕು ತಗುಲಿರುವ ಮಗುವನ್ನು ಬಹಳ ಚೆನ್ನಾಗಿ ಆರೈಕೆ ಮಾಡಿ. ಕಣ್ಣನ್ನು ಹೆಚ್ಚು ತಂಪಾಗಿಡಿ. ಬಹಳ ಬೇಗ ಗುಣಮುಖರಾಗುವಂತೆ ನೋಡಿಕೊಳ್ಳಿ.