ಆಸ್ಪತ್ರೆಯಲ್ಲಿಯೇ ವಿಶೇಷ ಚೇತನೆ ಅಪ್ರಾಪ್ತೆಯ ಮೇಲೆ ಅತ್ಯಾಚಾರ..!!!

ಮಂಗಳೂರು : ನಗರದ ಪಂಪ್ ವೆಲ್ ಬಳಿಯಿರುವ ಖಾಸಗಿ ಆಸ್ಪತ್ರೆಯಲ್ಲಿಯೇ ಕಾಮುಕನೋರ್ವನು ವಿಶೇಷ ಚೇತನೆ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ಹೇಯ ಕೃತ್ಯವನ್ನು ಎಸಗಿದ ಆರೋಪಿ ಹಾಗೂ ಆತನಿಗೆ ಸಹಕರಿಸಿದ ಮಹಿಳೆಯನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ‌.

ಮನ್ಸೂರ್ ಅಹ್ಮದ್ ಬಾಬಾ ಶೇಖ್ ಹಾಗೂ ಬಿಹಾರ ಮೂಲದ ಸದ್ಯ ಮುಂಬೈ ವಾಸಿ ಅಬ್ದುಲ್ ಹಲೀಂ ಆಗಸ್ಟ್ 10ರಂದು ಬೈಕ್ ನಲ್ಲಿ ಕಾಸರಗೋಡಿಗೆ ಹೋಗಿ ಬರುತ್ತಿದ್ದ ವೇಳೆ ಮಂಜೇಶ್ವರ ಹೊಸಂಗಡಿ ಬಳಿ ಬೈಕ್ ಅಪಘಾತಗೊಂಡಿದೆ. ಇಬ್ಬರೂ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳು ತಮ್ಮನನ್ನು ನೋಡಲು ಮನ್ಸೂರ್ ಅಹ್ಮದ್ ಸಹೋದರಿ ತನ್ನ ವಿಶೇಷ ಚೇತನೆ ಅಪ್ರಾಪ್ತ ಪುತ್ರಿ ಹಾಗೂ ಮನ್ಸೂರ್ ಪತ್ನಿ ಶಮೀನಾ ಬಾನುವಿನೊಂದಿಗೆ ಬಂದಿದ್ದರು‌.

ಬಳಿಕ ಆಕೆ ತನ್ನ ಪುತ್ರಿ ಹಾಗೂ ಶಮೀನಾ ಬಾನುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೊರಗಡೆ ಹೋಗಿದ್ದರು‌. ಈ ವೇಳೆ ಆರೋಪಿ ಅಬ್ದುಲ್ ಹಲೀಂ ಗಾಯಾಳು ಮನ್ಸೂರ್ ಪತ್ನಿ ಶಮೀನಾ ಬಾನುವಿನೊಂದಿಗೆ ಆಸ್ಪತ್ರೆಯೊಳಗಡೆಯೇ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ. ಇದನ್ನು ವಿಶೇಷ ಚೇತನೆ ಅಪ್ರಾಪ್ತೆ ನೋಡಿದ್ದಾಳೆ. ಇದನ್ನು ಗಮನಿಸಿದ ಶಮೀನಾ ಬಾಲಕಿಯನ್ನು ಬೆಡ್ ಮೇಲೆ ಕುಳ್ಳಿರಿಸಿದ್ದಾಳೆ. ಆಗ ಆರೋಪಿ ಆಕೆಯ ಮೇಲೂ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಇದಕ್ಕೆ ಪ್ರತಿರೋಧ ಒಡ್ಡಿದಾಗ ಶಮೀನಾ ಬಾನು ಅತ್ಯಾಚಾರ ಎಸಗಲು ಸಹಕರಿಸಿದ್ದಾಳೆ‌.

ವಿಚಾರ ತಿಳಿದು ಮಂಗಳೂರು ಮಹಿಳಾ ಠಾಣೆಗೆ ಸಂತ್ರಸ್ತ ಬಾಲಕಿ ತಾಯಿ ದೂರು ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂಬೈಗೆ ಪರಾರಿಯಾಗಲೆತ್ನಿಸುತ್ತಿದ್ದ ಆರೋಪಿ ಅಬ್ದುಲ್ ಹಮೀದ್ ನನ್ನು ಬಂಧಿಸಿದ್ದಾರೆ. ಜೊತೆಗೆ ಕೃತ್ಯಕ್ಕೆ ಸಹಕರಿಸಿರುವ ಶಮೀನಾ ಬಾನುವನ್ನು ಬಂಧಿಸಿದ್ದಾರೆ. ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 15ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

You cannot copy content from Baravanige News

Scroll to Top