ಬೆಂಗಳೂರು : ಭಾರತದ ಕನಸಿನ ನೌಕೆ ಚಂದ್ರಯಾನ-3 ಯಶಸ್ವಿಯಾಗಲು ಒಂದೇ ದಿನ ಬಾಕಿ ಇದೆ. ನಾಳೆ ಸಂಜೆ ವಿಕ್ರಂ ನೌಕೆ ಚಂದ್ರನ ಮೇಲೆ ಲ್ಯಾಂಡ್ ಆಗುವ ನಿರೀಕ್ಷೆ ಇದೆ. ಹೀಗಿರುವಾಗ ಚಂದ್ರಯಾನ-3 ಯಶಸ್ವಿಯಾಗಲೆಂದು ಹಲವರು ಹರಕೆ ಕಟ್ಟಿಕೊಳ್ಳುತ್ತಿದ್ದಾರೆ. ದೇವರ ಮೊರೆ ಹೋಗಿ ಪೂಜೆ ಸಲ್ಲಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಉಡುಪಿ ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ವಿಕ್ರಂ ಲ್ಯಾಂಡ್ ಆಗುವ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಭಾರತ ಹಾಗೂ ರಷ್ಯಾ ಎರಡೂ ದೇಶಗಳು ವಾಯುತತ್ವ ರಾಶಿ ಪ್ರಕಾರ ಉಪಗ್ರಹ ಉಡಾಯಿಸಿದೆ. ರಷ್ಯಾ ಮಿಥುನ ಹಾಗೂ ಭಾರತ ತುಲಾ ಲಗ್ನ ದ ಪ್ರಕಾರ ಉಪಗ್ರಹ ಉಡಾವಣೆಯಾಗಿದೆ. ಕುಜದ ಪರಿಣಾಮ ಯಾಂತ್ರೀಕೃತ ದೋಷದಿಂದ ರಷ್ಯಾ ಉಪಗ್ರಹ ವಿಫಲವಾಗಿದೆ ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.
ಜ್ಯೋತಿಷ್ಯ ಹಾಗೂ ವಿಜ್ಞಾನ ಲೆಕ್ಕಾಚಾರ ಎರಡೂ ಒಂದೇ
ನಂತರ ಮಾತು ಮುಂದುವರಿಸಿದ ಅವರು, ಜ್ಯೋತಿಷ್ಯ ಹಾಗೂ ವಿಜ್ಞಾನ ಲೆಕ್ಕಾಚಾರ ಎರಡೂ ಒಂದೇ. ಇದಕ್ಕೆ ನನ್ನ ಬಳಿಯೂ ಸರಿಯಾದ ಲೆಕ್ಕಾಚಾರ ಇದೆ. ತುಲಾ ಲಘ್ನ ದಲ್ಲಿ ಕಳುಹಿಸಿದ ನೌಕೆ ಕುಂಭ ಲಗ್ನದಲ್ಲಿ ಲ್ಯಾಂಡ್ ಆಗಬೇಕು. ಆಗಸ್ಟ್ 23ರ ಸಂಜೆ 6:30ರ ನಂತರ ಚಂದ್ರನಲ್ಲಿ ಇಳಿದರೆ ನನ್ನ ಜ್ಯೋತಿಷ್ಯ ಹಾಗೂ ವಿಜ್ಞಾನ ಅಧ್ಯಯನ ಸಾರ್ಥಕ ಎಂದು ಹೇಳಿದ್ದಾರೆ.
ರಷ್ಯಾ ದ ಉಪಗ್ರಹ ಮಿಥುನ ಲಗ್ನದಲ್ಲಿ ಹೊರಟಿದೆ
ರಷ್ಯಾ ದ ಉಪಗ್ರಹ ಮಿಥುನ ಲಗ್ನ ದಲ್ಲಿ ಹೊರಟಿರುವುದೇ ತಾಂತ್ರಿಕ ವೈಫಲ್ಯಕ್ಕೆ ಕಾರಣವಾಗಿದೆ. ಭಾರತದ ಚಂದ್ರಯಾನ 3 ಕ್ಕೆ ದೈವಬಲ ಪೂರ್ಣವಾಗಿದೆ. ಭಾರತೀಯ ವಿಜ್ಞಾನಿಗಳು ತಿರುಪತಿ ವೆಂಕಟರಮಣ ದೇವರ ಆಶೀರ್ವಾದ ಪಡೆದಿದ್ದಾರೆ. ದೇವರ ಆಶೀರ್ವಾದ ಪಡೆದ ಹಿನ್ನಲೆ ಚಂದ್ರಯಾನ 3 ಎಂದೂ ನಿಧಾನಗತಿ ಪಡೆಯಲಿಲ್ಲ. ಚಂದ್ರಯಾನ- 3 ಆಗಸ್ಟ್ 23 ರ ಸಂಜೆ ಕುಂಭ ಲಗ್ನ 6:30 ರ ನಂತರ ಚಂದ್ರನ ಮೇಲೆ ಇಳಿಯಬೇಕು ಎಂದು ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.