ಕರಾವಳಿಯ ಮೂಲಕ ಯಾವುದೇ ಮಾನವ ಕಳ್ಳ ಸಾಗಾಣಿಕೆ ನಡೆದಿಲ್ಲ; ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ ಅಬ್ದುಲ್ ಅಹದ್



ಉಡುಪಿ : ಮೀನುಗಾರರ ಉತ್ತಮ ಸಹಕಾರದಿಂದ ಸಮುದ್ರ ಮಧ್ಯೆ ಉಂಟಾಗಿರುವ ಅನೇಕ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗಿದೆ ಎಂದು ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ ಅಬ್ದುಲ್ ಅಹದ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ರಜತೋತ್ಸವ ಸಮಿತಿ ಇದರ ಆಶ್ರಯದಲ್ಲಿ ಪತ್ರಿಕಾ ಭವನದಲ್ಲಿ ಪತ್ರಕರ್ತರೊಂದಿಗೆ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಟಿಂ ವರ್ಕ್ ನಲ್ಲಿ ನಾನು ನಂಬಿಕೆ ಇರಿಸಿಕೊಂಡಿದ್ದೇನೆ. ಇದರಿಂದ ನನಗೆ ಯಶಸ್ಸು ಸಿಕ್ಕಿದೆ. ಕರಾವಳಿ ಪೊಲೀಸ್ ಪಡೆಯಲ್ಲೂ ಟೀಂ ವರ್ಕ್ ಮೂಲಕ ಕೆಲಸ ಮಾಡಿದ್ದು ಮೀನುಗಾರರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಕಾರಣ ಅನೇಕ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯವಾಗಿದೆ ಎಂದರು.

ಮಾನವ ಕಳ್ಳ ಸಾಗಾಣೆಯ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು,ಅಂತಹ ಯಾವುದೇ ಘಟನೆಗಳು ಆಗಿಲ್ಲ, ತಮಿಳುನಾಡಿನಲ್ಲಿ ನಡೆದಿರುವ ಬಗ್ಗೆ ವರದಿಯಾಗಿತ್ತು. ಆದ್ರೆ ನಮ್ಮಲ್ಲಿ ಆಗಿಲ್ಲ. ಆದ್ರೂ ಸಹ ನಾವು ಅಲರ್ಟ್ ಆಗಿದ್ದೇವೆ ಎಂದರು.

You cannot copy content from Baravanige News

Scroll to Top