ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ವಿಕಾರ್ ಜನರಲ್ ಮೊನ್ಸಿಂಜರ್ ಬ್ಯಾಪ್ಟಿಸ್ಟ್ ಮಿನೇಜಸ್ ನಿಧನ

ಉಡುಪಿ : ಧರ್ಮಪ್ರಾಂತ್ಯದ ನಿವೃತ್ತ ವಿಕಾರ್ ಜನರಲ್ ಮೊನ್ಸಿಂಜರ್ ಬ್ಯಾಪ್ಟಿಸ್ಟ್ ಮಿನೇಜಸ್ ಅವರು ಆಗಸ್ಟ್ 23 ಬುಧವಾರದಂದು ನಿಧನರಾಗಿದ್ದಾರೆ.



ಬ್ಯಾಪ್ಟಿಸ್ಟ್ ಮೆನೆಜಸ್ ಅವರು ದಿವಂಗತ ಲೂಯಿಸ್ ಮೆನೆಜಸ್ ಮತ್ತು ದಿವಂಗತ ಮೇರಿ ಮ್ಯಾಗ್ಡೆಲೀನ್ ಮೆನೆಜಸ್ ಅವರ ಮಗನಾಗಿ ಜುಲೈ 28, 1948 ರಂದು ಜನಿಸಿದರು.

ಇನ್ನು ಅಕ್ಟೋಬರ್ 25,1974 ರಂದು ಅವರಿಗೆ ಯಾಜಕಿ ದೀಕ್ಷೆ ಲಭಿಸಿತು. ಬ್ಯಾಪ್ಟಿಸ್ಟ್ ಮೆನೆಜಸ್ ಅವರು, ರೋಮ್‌ನ ಲ್ಯಾಟರನ್ ವಿಶ್ವವಿದ್ಯಾಲಯದಿಂದ ನೈತಿಕ ದೇವತಾಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.

1982 ರಲ್ಲಿ ಅವರ ಡಾಕ್ಟರೇಟ್ ಅಧ್ಯಯನವನ್ನು ಪೂರ್ಣಗೊಳಿಸಿ ಬಳಿಕ ಬೆಂಗಳೂರಿನ ಸೇಂಟ್ ಪೀಟರ್ಸ್ ಪೊಂಟಿಫಿಕಲ್ ಸೆಮಿನರಿಗೆ ಸೇರಿ ಅಲ್ಲಿ1994 ರವರೆಗೆ ಸೇವೆ ಸಲ್ಲಿಸಿದರು.

1995ರಲ್ಲಿ ಮಂಗಳೂರಿನ ಜೆಪ್ಪುವಿನಲ್ಲಿರುವ ಸೈಂಟ್ ಜೋಸೆಫ್ ಇಂಟರ್-ಡಯಾಸಿಸ್ ಸೆಮಿನರಿಯ ಆಡಳಿತಾಧಿಕಾರಿಯಾಗಿ ನೇಮಕಗೊಂಡರು. 1997ರಲ್ಲಿ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾಗಿ 2007ರ ವರೆಗೆ ಈ ಹುದ್ದೆಯನ್ನು ನಿರ್ವಹಿಸಿದರು. ಅವರು 2012 ರಲ್ಲಿ ಉಡುಪಿಯ ಹೊಸ ಧರ್ಮಪ್ರಾಂತ್ಯದ ಮೊದಲ ವಿಕಾರ್ ಜನರಲ್ ಆಗಿ ನೇಮಕಗೊಂಡರು, ಅದಕ್ಕೂ ಮುನ್ನ ಅವರು ಉಡುಪಿ ಜಿಲ್ಲೆಯ ಎಪಿಸ್ಕೊಪಲ್ ವಿಕಾರ್ ಆಗಿ ಸೇವೆ ಸಲ್ಲಿಸಿದ್ದರು.

Scroll to Top