ವಿಟ್ಲ : ಯುವಕನೋರ್ವನಿಂದ ನಿನ್ನೆ ಹತ್ಯೆಯಾದ ವಿಟ್ಲ ಮೂಲದ ಯುವತಿ ಗೌರಿ ನಿವಾಸಕ್ಕೆ ಕೇಂದ್ರ ಸಚಿವರಾದ ಭಗವಂತ ಕೂಭ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ಈ ವೇಳೆ ಬಿಜೆಪಿ ಮುಖಂಡರಾದ ಪದ್ಮನಾಭ ಕೊಟ್ಟಾರಿ, ಹರಿಪ್ರಸಾದ್ ಯಾದವ್, ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಹಲವರು ಉಪಸ್ಥಿತರಿದ್ದರು.
ಪುತ್ತೂರಿನ ವಸ್ತ್ರ ಮಳಿಗೆಯೊಂದರಲ್ಲಿ ಕೆಲಸಕ್ಕಿದ್ದ ವಿಟ್ಲ ಮೂಲದ ಯುವತಿ ಗೌರಿಯನ್ನು ಪದ್ಮರಾಜ್ ನಿನ್ನೆ ಚೂರಿಯಿಂದ ಇರಿದು ಹತ್ಯೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.