ಮೂಡುಬಿದಿರೆ: ಖಾಸಗಿ ಟೂರಿಸ್ಟ್ ಬಸ್ಸೊಂದು ಪಲ್ಟಿಯಾಗಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಸಮೀಪದ ವೇಣೂರಿನ ಪಡ್ಡಂದಡ್ಕ ನಡೆದಿದೆ.
ಬಸ್ ಪಲ್ಟಿಯಾದ ಅವಘಡದಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದೆ.
ತಾಕೋಡೆ ಸಮೀಪದ ವೃದ್ಧರಿಗೆ ಹೆಚ್ಚಿನ ಗಾಯಗಳಾಗಿದ್ದು ,ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.
ಇತರ ಗಾಯಾಳುಗಳನ್ನು ಕೂಡ ಅಂಬ್ಯುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಕಾರ್ಕಳ ಮೂಡುಬಿದಿರೆಯಾಗಿ ಬೆಂಗಳೂರಿಗೆ ಸಾಗುವ ಈ ಬಸ್ಸಿನಲ್ಲಿ ಒಟ್ಟು 27 ಮಂದಿ ಪ್ರಯಾಣಿಕರು ಪ್ರಯಾಣವನ್ನು ಮಾಡ್ತ ಇದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಅತಿಯಾದ ವೇಗದ ಚಾಲನೆಯೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಅಪಘಾತದಿಂದ ಒಂದು ಗಂಟೆಗೂ ಹೆಚ್ಚು ಕಾಲ ಇತರ ವಾಹನಗಳ ಸಂಚಾರಕ್ಕೆ ತಡೆ ಉಂಟಾಗಿದೆ.
ಆ ಬಳಿಕ ಕ್ರೇನ್ ಬಳಸಿ ವಾಹನ ತೆರವುಗೊಳಿಸಿ ಸುಗುಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ವೇಣೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.