ಪಡುಬಿದ್ರಿ: ಸ್ಕೂಟರ್‌ಗೆ ಬುಲೆಟ್‌ ಟ್ಯಾಂಕರ್‌ ಢಿಕ್ಕಿ; ಓರ್ವ ಸಾವು

ಪಡುಬಿದ್ರಿ: ಕನ್ನಂಗಾರ್‌ ಜಂಕ್ಷನ್‌ ಬಳಿ ಸೋಮವಾರ ಬೆಳಿಗ್ಗೆ ಸ್ಕೂಟರ್‌ಗೆ ಬುಲೆಟ್‌ ಟ್ಯಾಂಕರ್‌ ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಜಾರ್ಖಂಡ್‌ ಮೂಲದ ಕೂಲಿ ಕಾರ್ಮಿಕ ಸದ್ದಾಂ ಅನ್ಸಾರಿ(24) ಸಾವನ್ನಪ್ಪಿದ್ದಾರೆ.

ಕನ್ನಂಗಾರಿನಿಂನ ಪಡುಬಿದ್ರಿಯತ್ತ ಬರುತ್ತಿದ್ದ ಸ್ಕೂಟರ್‌ಗೆ ಮಂಗಳೂರು ಕಡೆಯಿಂದ ಉಡುಪಿಯತ್ತ ಹೋಗುತ್ತಿದ್ದ ಬುಲೆಟ್‌ ಟ್ಯಾಂಕರ್‌ ಎಡಬದಿ ತಾಗಿ ಅಪಘಾತವಾಗಿತ್ತು. ರಸ್ತೆಗಪ್ಪಳಿಸಲ್ಪಟ್ಟ ಸಹ ಸವಾರ ಸದ್ದಾಂ ಅನ್ಸಾರಿ ಟ್ಯಾಂಕರಿನ ಹಿಂಬದಿ ಚಕ್ರಕ್ಕೆ ಸಿಲುಕಿ ಕಾಲಿಗೆ ತೀವ್ರ ಗಾಯಗಳಾಗಿದ್ದವು. ಆ ಕೂಡಲೇ ಮುಕ್ಕದ ಖಾಸಗಿ ಆಸ್ಪತ್ರೆಗೆ ಒಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸ್ಕೂಟರ್‌ ಸವಾರ ಪಾಣಾಪಾಯವಿಲ್ಲದೇ ಪಾರಾಗಿದ್ದಾರೆ.

ಅಪಾಯಕಾರಿ ಕನ್ನಂಗಾರ್‌ ಜಂಕ್ಷನ್‌ಗೆ ಮುಕ್ತಿಯಿಲ್ಲ
ಕನ್ನಂಗಾರ್‌ನ ಅತೀ ಅಪಾಯಕಾರಿ ಈ ಜಂಕ್ಷನ್‌ನ ಭಾಗದಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣಮಾಡಲು ಬಹಳಷ್ಟು ಜನಾಂದೋಲನಗಳು ಹಿಂದೆ ನಡೆದಿದ್ದವು. ಯಾವುದನ್ನೂ ಗುತ್ತಿಗೆದಾರ ನವಯುಗ ನಿರ್ಮಾಣ ಕಂಪೆನಿಯಾಗಲೀ, ರಾಷ್ಟಿÅàಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುವ ಗೋಜಿಗೇ ಹೋಗಿಲ್ಲ. ಒಮ್ಮೆ ಅರೆಬರೆ ಕಾಮಗಾರಿ ನಡೆಸಿ ಅರ್ಧಕ್ಕೇ ನಿಲ್ಲಿಸಲಾಗಿತ್ತು. ಉಡುಪಿ ಸಂಸದೆ ಶೋಭಾ ಕರಂದ್ಲಜೆ ಅವರೂ ಈ ಕುರಿತಾಗಿ ಗಮನ ಹರಿಸಿಲ್ಲ ಎಂದು ಈ ಕುರಿತಾಗಿ ಹೋರಾಟ ನಡೆಸಿದ್ದ ಶೇಖರ್‌ ಹೆಜ್ಮಾಡಿ ಆರೋಪಿಸಿದ್ದಾರೆ.

ಸಾವು ನೋವುಗಳ ಬಳಿಕವಾದರೂ ಈ ಭಾಗದಲ್ಲಿ ಪಡುಬಿದ್ರಿ, ಉಡುಪಿ ಕಡೆಯಿಂದ ಹೆಜಮಾಡಿಗೆ ಸಾಗಿ ಬರುವ ವಾಹನಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ವೀಸ್‌ ರಸ್ತೆ ನಿರ್ಮಾಣ ಅತ್ಯಗತ್ಯ ಎಂಬುದಾಗಿ ಸಾರ್ವಜನಿಕ ಅಭಿಪ್ರಾಯವಾಗಿದೆ.

You cannot copy content from Baravanige News

Scroll to Top