ಜೈಲರ್ ಸಿನೆಮಾದಲ್ಲಿ ಆರ್ ಸಿಬಿ ಜೆರ್ಸಿ – ಕೋರ್ಟ್ ಮೆಟ್ಟಿಲೇರಿದ ತಂಡ

ಚೆನ್ನೈ : ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಈಗಾಗಲೇ ಒಂದರ ಹಿಂದೆ ಒಂದರಂತೆ ಬಾಕ್ಸ್ ಆಫೀಸ್ ದಾಖಲೆಗಳನ್ನು ಛಿದ್ರ ಮಾಡುತ್ತಾ ಸುದ್ದಿಯಲ್ಲಿದೆ. ಈ ನಡುವೆ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದ್ದು. ಐಪಿಎಲ್ ಟೀಮ್ ಆರ್ ಸಿಬಿ ಜೈಲರ್ ಸಿನೆಮಾ ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ.


ಚಿತ್ರದಲ್ಲಿ ಕೊಲೆಗಾರನೊಬ್ಬ ಆರ್‌ಸಿಬಿ ಜರ್ಸಿ ಧರಿಸುವ ದೃಶ್ಯವಿದ್ದು, ಇದರಿಂದಾಗಿ ಬ್ರ್ಯಾಂಡ್ ನ ಮೇಲೆ ಪರಿಣಾಮ ಬೀರುತ್ತದೆ ಎಂದು ಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ಇತ್ತೀಚೆಗೆ ನಡೆದಿದ್ದು, ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥಪಡಿಸುವುದಾಗಿ ಎರಡೂ ಕಡೆಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ‘ಜೈಲರ್’ ನಿರ್ಮಾಪಕರು, ದೃಶ್ಯವನ್ನು ಡಿಜಿಟಲ್ ಆಗಿ ಬದಲಾಯಿಸುವುದಾಗಿ ಭರವಸೆ ನೀಡಿದ್ದರು.

‘ಜೈಲರ್’ನ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್, ಸೆಪ್ಟೆಂಬರ್ 1 ರೊಳಗೆ ಬದಲಾವಣೆ ಮಾಡಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿತು. ಬದಲಾದ ದೃಶ್ಯದೊಂದಿಗೆ ಚಿತ್ರವನ್ನು ಟಿವಿ ಮತ್ತು OTT ವೇದಿಕೆಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

You cannot copy content from Baravanige News

Scroll to Top