ಬೆಂಗಳೂರು, ಆ 30: ಶ್ರೀಗಂಧ ಮರ ಕಡಿಯಲು ಬಂದ ಕಳ್ಳನ ಮೇಲೆ ಬೀಟ್ ಫಾರೆಸ್ಟ್ಗಾರ್ಡ್ ಫೈರಿಂಗ್ ಮಾಡಿದ ಪರಿಣಾಮ ಗಂಧದ ಚೋರ ಸ್ಥಳದಲ್ಲೇ ಮೃತಪಟ್ಟ ಘಟನೆ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿನಡೆದಿದೆ.
ಬನ್ನೇರುಘಟ್ಟ ಅರಣ್ಯದಲ್ಲಿ ರೌಂಡ್ಸ್ನಲ್ಲಿದ್ದ ಫಾರೆಸ್ಟ್ ಗಾರ್ಡ್ಗಳಿಗೆ ಮರ ಕಡಿಯುವ ಶಬ್ದ ಕೇಳಿಸಿ ಫಾರೆಸ್ಟ್ ಗಾರ್ಡ್ಗಳು ಶರಣಾಗುವಂತೆ ವಾರ್ನಿಂಗ್ ಮಾಡಿದ್ದಾರೆ.
ಶರಣಾಗದೆ ಪರಾರಿಯಾಗಲು ಯತ್ನಿಸಿದಾಗ ಫಾರೆಸ್ಟ್ಗಾರ್ಡ್ ವಿನಯ್ ಫೈರಿಂಗ್ ಮಾಡಿದ್ದಾರೆ. ಇದರಿಂದ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೊರ್ವ ಪರಾರಿಯಾಗಿದ್ದಾನೆ.
ಮೃತ ಕಳ್ಳ ಕೋಲಾರ ಜಿಲ್ಲೆ ಮಾಲೂರು ಮೂಲದ ನಿವಾಸಿಯಾಗಿದ್ದಾನೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ ಮಲ್ಲಿಕಾರ್ಜುನ್ ಬಾಲದಂಡಿ ಮತ್ತು ಎಫ್‌ಎಸ್‌ಎಲ್ ಟೀಮ್ ಭೇಟಿ ನೀಡಿದೆ.
ಶ್ರೀಗಂಧ ಮರಗಳು ಇರುವುದರಿಂದ ಕಳ್ಳರ ಹಾವಳಿ ಇದ್ದು ಅರಣ್ಯ ಇಲಾಖೆ ನೈಟ್ ಪೆಟ್ರೋಲಿಂಗ್ ಹೆಚ್ಚಿಸಿದೆ.