ಉಡುಪಿ : ಇಸ್ಲಾಮಿಕ್ ವೆಲ್ ಫೇರ್ ಸೊಸೈಟಿ ಮಹಾಸಭೆ

ಉಡುಪಿ : ಇಸ್ಲಾಮಿಕ್ ವೆಲ್ಫೇರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ ಇದರ ವಾರ್ಷಿಕ ಮಹಾಸಭೆ ಉಡುಪಿಯ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಸಭಾಂಗಣದಲ್ಲಿ ನಡೆಯಿತು.
ಸೊಸೈಟಿ ಅಧ್ಯಕ್ಷ ಅಕ್ಬರ್ ಆಲಿ ಮಹಾಸಭಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಆರೀಫ್ ಕಾಶಿಂ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಸಲಾಹುದ್ದೀನ್ ಸಾಹೇಬ್ ಲೆಕ್ಕ ಪರಿಶೋಧಕ ನೇಮಕ ಪ್ರಕ್ರಿಯೆ ನಡೆಸಿಕೊಟ್ಟರು. ನಿರ್ದೇಶಕರಾದ ಅನ್ವರ್ ಆಲಿ ಕಾಪು 2021-22 ಸಾಲಿನ ವಾರ್ಷಿಕ ವರದಿ ಓದಿದರು. ಇನ್ನೋರ್ವ ನಿರ್ದೇಶಕರಾದ ಮಹಮ್ಮದ್ ಇಕ್ಬಾಲ್ ಕಾಪು 2022-23ರ ಸಾಲಿನ ಅಂದಾಜು ಆಯವ್ಯಯ ಪತ್ರದ ಮಂಡನೆ ಮಾಡಿದರು. ಸದಸ್ಯರಾದ ಮಹಮದ್ ಶಾರುಖ್ ಮಹಾಸಭೆಯ ಆಮಂತ್ರಣ ಪತ್ರಿಕೆ ಓದಿ ದಾಖಲಿಸಿದರು.
ಸದಸ್ಯರಾದ ಮೌಲಾನಾ ದಾನಿಶ್ ಪ್ರಾರ್ಥಿಸಿ ನಿರ್ದೇಶಕ ನಿಸಾರ್ ಅಹಮದ್ ಸ್ವಾಗತಿಸಿದರು. ನಿರ್ದೇಶಕ ರಿಯಾಝ್ ಅಹ್ಮದ್ ವಂದಿಸಿ ನಿರ್ದೇಶಕ ಜಿ ಎಂ ಶರೀಫ್ ಹೂಡೆ ಕಾರ್ಯಕ್ರಮ ನಿರೂಪಿಸಿದರು.

You cannot copy content from Baravanige News

Scroll to Top