ಮಲ್ಪೆ, ಆ.31: ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ಗುರುವಾರ ಮೀನುಗಾರರಿಂದ ಸಾಮೂಹಿಕ ಸಮುದ್ರಪೂಜೆ ಮಲ್ಪೆ ವಡಭಾಂಡೇಶ್ವರ ಸಮುದ್ರ ತೀರದಲ್ಲಿ ಜರಗಿತು.
ಮೀನುಗಾರರು ಬೆಳಗ್ಗೆ ವಡಭಾಂಡೇಶ್ವರದ ಬಲರಾಮ ಮತ್ತು ಬೊಬ್ಬರ್ಯ ದೇವರಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಶೋಭಾಯಾತ್ರೆಯ ಮೂಲಕ ಸಮುದ್ರ ಕಿನಾರೆಗೆ ತೆರಳಿ, ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಮುಂಬರುವ ದಿನಗಳಲ್ಲಿ ಮೀನುಗಾರಿಕೆಗೆ ಯಾವುದೇ ಅಡ್ಡಿ ಆತಂಕಗಳು ಇಲ್ಲದೆ, ಹೇರಳ ಮತ್ಸ ಸಂಪತ್ತು ವೃದ್ಧಿಯಾಗಬೇಕು. ಸಮುದ್ರದಲ್ಲಿ ಮೀನು ಗಾರಿಕೆ ನಡೆಸುವ ವೇಳೆ ಯಾವುದೇ ಅವಘಡಗಳು, ಪ್ರಾಕೃತಿಕ ವಿಕೋಪಗಳು ಉಂಟಾಗದಂತೆ, ಮೀನುಗಾರರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳು ಬಾರದೆ ಪರಸ್ಪರ ಐಕ್ಯತೆ, ಸೌಹಾರ್ದತೆಯಿಂದ ಒಗ್ಗಟ್ಟಾಗಿ ಮೀನುಗಾರಿಕೆ ಯನ್ನು ನಡೆಸುವಂತೆ ಗಂಗಾಮಾತೆ ಅನುಗ್ರಹವನ್ನು ನೀಡುವಂತೆ ಪ್ರಾರ್ಥಿಸಿ ಹಾಲು, ಸೀಯಾಳ, ಸಮುದ್ರರಾಜನಿಗೆ ಅರ್ಪಿಸಲಾಯಿತು.