ಬಿಎಸ್ವೈ ಇಲ್ಲದಿರುವುದು ಬಿಜೆಪಿಗೆ ಶಾಪ – ಎಂಪಿ ರೇಣುಕಾಚಾರ್ಯ

ಬೆಂಗಳೂರು : ಬಿಎಸ್ ಯಡಿಯೂರಪ್ಪ ಅಂತಹ ಮಹಾನ್ ನಾಯಕರನ್ನು ಕಡೆಗಣಿಸಿ ಬಿಜೆಪಿಗೆ ಶಾಪ ಆಗಿದೆ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇವತ್ತು ಪಕ್ಷದಲ್ಲಿ ವರ್ಚಸ್ಸು ಇರುವವರಿಗೆ ಬೆಳೆಯಲು ಬಿಡುತ್ತಿಲ್ಲ. ಇದರಿಂದ ನನಗೆ ವೈಯಕ್ತಿಕವಾಗಿ ಯಾವ ಲಾಭ ಇಲ್ಲ, ನಷ್ಟವೂ ಇಲ್ಲ. ಪ್ರತಿಯೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತನ ಅಪೇಕ್ಷೆಯನ್ನು ನಾನು ನೇರವಾಗಿ ಹೇಳಿದ್ದೇನೆ ಎಂದರು.

ನಾನು ಪಕ್ಷ, ಮೋದಿ, ನಡ್ಡಾ, ಅಮಿತ್ ಶಾ ವಿರುದ್ಧ ಮಾತಾಡಿಲ್ಲ. ಕೆಲ ವ್ಯಕ್ತಿಗಳ ದೌರ್ಬಲ್ಯವನ್ನು ನಾನು ನೇರವಾಗಿ ಖಂಡಿಸಿದ್ದೇನೆ. ನಾನು ಬಿಜೆಪಿ ಬಿಡೋದಿಲ್ಲ, ಪಕ್ಷದಲ್ಲೇ ಇದ್ದೇನೆ. ನಾನು ಯಾವುದನ್ನು ಮುಚ್ಚುಮರೆ ಇಲ್ಲದೆ ಹೇಳಿದ್ದೇನೆ. ಪಕ್ಷದಲ್ಲಿ ಸಂಘಟನೆ ಕೊರತೆ ಇದೆ, ಇದು ಸರಿಯಾಗಬೇಕು ಎಂದಿದ್ದಾರೆ.

ಯಡಿಯೂರಪ್ಪ ಅವರಂತಹ ನಾಯಕರನ್ನ ಕಡೆಗಣಿಸಿದ್ದಾರೆ, ಇದು ಬಿಜೆಪಿಗೆ ಶಾಪವಾಗಿದೆ. ವರ್ಚಸ್ಸು ಇರುವವರನ್ನ ಬೆಳೆಯೋಕೆ ಬಿಡ್ತಿಲ್ಲ. ವಿಜಯೇಂದ್ರ ಅಂತಹವರನ್ನ ಮೂಲೆಗುಂಪು ಮಾಡ್ತಿದ್ದಾರೆ. ನಾನು ನೇರವಾಗಿಯೇ ಮಾತನಾಡಿದ್ದೇನೆ. ಅದಕ್ಕೆ ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ. ನಾನು ಪಕ್ಷ, ಮೋದಿ, ನಡ್ಡಾ, ಅಮಿತ್ ಶಾ ವಿರುದ್ಧ ಮಾತನಾಡಿಲ್ಲ. ನಾನು ಮಾತಾಡಿರೋದು ಕೆಲ ವ್ಯಕ್ತಿಗಳ ದೌರ್ಬಲ್ಯವನ್ನ ಅಷ್ಟೇ. ಅದನ್ನ ನೇರವಾಗಿ ಖಂಡಿಸಿದ್ದೇನೆ ಎಂದು ಗುಡುಗಿದ್ದಾರೆ.

You cannot copy content from Baravanige News

Scroll to Top