ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಜನಪ್ರಿಯ ನಟಿ ಬಲಿ

ಜನಪ್ರಿಯ ನಟಿ, ಮಾಡೆಲ್ ಮತ್ತು ಟಿವಿ ನಿರೂಪಕಿ ಸಿಲ್ವಿನಾ ಲೂನಾ ನಿಧನರಾಗಿದ್ದಾರೆ. 2010 ರಲ್ಲಿ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯ ಬಳಿಕ ಈ ನಟಿಯ ಆರೋಗ್ಯದಲ್ಲಿ ಒಂದೊಂದಾಗಿ ಸಮಸ್ಯೆಗಳು ಉಲ್ಬಣಗೊಳ್ಳುತ್ತಿದ್ದವು. ಹೀಗಾಗಿ ನಟಿ ಕಮ್ ಮಾಡೆಲ್ ಆಗಿದ್ದ ಸಿಲ್ವಿನಾ ಲೂನಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಟಿ ಸಿಲ್ವಿನಾ ಲೂನಾ ಮೃತಪಟ್ಟಿದ್ದಾರೆ.

ನಟಿ ಸಿಲ್ವಿನಾ ಲೂನಾ ಅರ್ಜೆಂಟೀನಾದಲ್ಲಿ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು. ಜೊತೆಗೆ ನಟಿಯು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ವಾರಕ್ಕೆ ಹಲವಾರು ಬಾರಿ ಡಯಾಲಿಸಿಸ್ ಮಾಡಬೇಕಾಗಿತ್ತು. 2010ರಲ್ಲಿ ಶಸ್ತ್ರಚಿಕಿತ್ಸೆಯ ಪರಿಣಾಮವಾಗಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ ದಿನ ಕಳೆದಂತೆ ಪ್ಲಾಸ್ಟಿಕ್ ಸರ್ಜರಿ ನಂತರ ನಟಿಗೆ ಆಗಾಗ ಸಮಸ್ಯೆಗಳನ್ನು ಬರುತ್ತಿದ್ದವಂತೆ.

ನಟಿ ಸಿಲ್ವಿನಾ ಕಳೆದ ಜೂನ್ 13 ರಂದೇ ಆಸ್ಪತ್ರೆಗೆ ದಾಖಲಾಗಿದ್ದರು. ನಿರಂತರ ಚಿಕಿತ್ಸೆಯ ಬಳಿಕವೂ ನಟಿ ಗುಣಮುಖರಾಗದೇ ಮೃತಪಟ್ಟಿದ್ದಾರೆ.

ಅರ್ಜೆಂಟೀನಾ ನಟಿಯ ನಿಧನಕ್ಕೆ ಸ್ನೇಹಿತರು, ಸಿನಿಮಾ ತಂಡದವರು ಕಂಬನಿ ಮಿಡಿದಿದ್ದಾರೆ. ಮೃತ ಸಿಲ್ವಿನಾ ಲೂನಾ ಸ್ನೇಹಿತ ಪತ್ರಕರ್ತ ಏಂಜೆಲ್ ಡಿ ಬ್ರಿಟೊ ಅವರು ಲೂನಾ ಅವರೊಂದಿಗೆ ಸುಮಾರು 20 ವರ್ಷಗಳ ಕಾಲ ಕೆಲಸ ಮಾಡಿದ್ದೆ. ಸಿಲ್ವಿನಾ ಅವರ ಜೊತೆ ಕಾಲ ಕಳೆದ ಪ್ರತಿಯೊಂದು ಸಮಯವೂ ಸಂತಸದಿಂದ ಕೂಡಿತ್ತು ಎಂದು ಹೇಳಿಕೊಂಡಿದ್ದಾರೆ. ಮಿಯಾಮಿಯ ಜಾಕಿ ಗ್ಲೀಸನ್ ಥಿಯೇಟರ್‌ನಲ್ಲಿ 2004 ರ MTV ವಿಡಿಯೋ ಮ್ಯೂಸಿಕ್ ಅವಾರ್ಡ್ಸ್ ಲ್ಯಾಟಿನ್ ಅಮೇರಿಕಾದಲ್ಲಿ ಸಿಲ್ವಿನಾ ಲೂನಾ ಪ್ರೆಸ್ ರೂಮ್‌ನಲ್ಲಿ ತೆರೆಮರೆಯಲ್ಲಿ ಕಾಣಿಸಿಕೊಂಡಿದ್ದರು.

You cannot copy content from Baravanige News

Scroll to Top