ಉಡುಪಿ: ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬ ಗಾದೆ ರಿಯಾ ಶೆಟ್ಟಿ ತನ್ನ ಸಾಧನೆಯ ಪಥದಲ್ಲಿ ಇನ್ನೊಂದು ಯಶಸ್ಸಿನ ಹೆಜ್ಜೆಯೂರಿದ್ದಾಳೆ ಮಾತಿನಂತೆ ನಿರಂತರವಾಗಿ ಸಾಧನೆ ಮಾಡುತ್ತಿರುವ ಪ್ರತಿಭಾವಂತೆ ರಿಯಾ ಶೆಟ್ಟಿ ತನ್ನ ಸಾಧನೆಯ ಪಥದಲ್ಲಿ ಇನ್ನೊಂದು ಯಶಸ್ಸಿನ ಹೆಜ್ಜೆಯೂರಿದ್ದಾಳೆ.
ಬುಡೋಕಾನ್ ಸ್ಪೋಟ್ಸ್೯ ಕರಾಟೆ- ಡೋ ಅಸೋಶಿಯೇಶನ್ ಅಪ್ ಇಂಡಿಯಾ ವತಿಯಿಂದ ದಿನಾಂಕ 02.09.23 ರಂದು ಆರ್ ಎಸ್ ಬಿ ಸಭಾಭವನ ಮಣಿಪಾಲ ಇಲ್ಲಿ ನಡೆದ ರಾಷ್ಟ್ರಮಟ್ಟದ ಆಹ್ವಾನಿತ ಮುಕ್ತ ಚಾಂಪಿಯನ್ ಲೀಗ್ ಬ್ಲಾಸ್ಟ್ 2023 ಸೀಸನ್-2 ನಲ್ಲಿ ಪ್ರಥಮ ಸ್ಥಾನಿಯಾಗಿ ಪ್ರಶಸ್ತಿಯೊಂದಿಗೆ ಪ್ರಮಾಣ ಪತ್ರವನ್ನು ಪಡೆದಿರುತ್ತಾಳೆ.
ಸ್ಪರ್ಧಿಸಿದ ಎಲ್ಲಾ ಸ್ವರ್ಧೆಗಳಲ್ಲಿ ತನ್ನ ಛಾಪು ಮೂಡಿಸಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುತ್ತಿರುವ ರಿಯಾ ಶೆಟ್ಟಿ ಉಡುಪಿ ಜಿಲ್ಲೆಯ ಹಾವಂಜೆ ಕೀಳಂಜೆಯ ಛಾಯಾಗ್ರಾಹಕ ಗಣೇಶ್ ಶೆಟ್ಟಿ ಮತ್ತು ಶ್ರೀಮತಿ ಜಯಲಕ್ಷ್ಮೀ ಗಣೇಶ್ ಶೆಟ್ಟಿಯವರ ಸುಪುತ್ರಿ ಯಾಗಿದ್ದು, ಉಡುಪಿಯ ಪ್ರತಿಷ್ಠಿತ ಒಳಕಾಡು ಪ್ರೌಢ ಶಾಲೆಯ ವಿದ್ಯಾರ್ಥಿನಿ. ಅಂತರಾಷ್ಟ್ರೀಯ ಖ್ಯಾತಿಯ ಕರಾಟೆ ತರಬೇತುದಾರೆ ಪ್ರವೀಣ ಸುವರ್ಣರ ಬಳಿ ಕರಾಟೆ ಅಭ್ಯಾಸ ಮಾಡುತ್ತಿರುವ ಕುಮಾರಿ ರಿಯಾ ಶೆಟ್ಟಿ ಉದಯೋನ್ಮುಖ ಪ್ರತಿಭೆ.
ಕಾರ್ಯಕ್ರಮದ ವೇದಿಕೆಯಲ್ಲಿ ರಾಜ್ಯ ಕರಾಟೆ ಅಸೋಸಿಯೇಶನ್ ಅಧ್ಯಕ್ಷರಾದ ಶಿಹಾನ್, ಶಿವಮೊಗ್ಗ ವಿನೋದ್ ಅಧ್ಯಕ್ಷತೆ ವಹಿಸಿದ್ದು. ಕರಾಟೆ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ನದೀಮ್ ಮೂಡಬಿದಿರೆ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು.
ನಗರಸಭೆ ಸದಸ್ಯ ಬಾಲಕ್ರಷ್ಣ ಶೆಟ್ಟಿ, ಕರಾಟೆ ಶಿಕ್ಷಕ ಸಂಘದ ಅಧ್ಯಕ್ಷರಾದ ಕಿರಣ್ ಕುಂದಾಪುರ, ಗೌರವ ಅಧ್ಯಕ್ಷರಾದ ಸಮಾಜರತ್ನ ಕಾಪು ಲೀಲಾದರ ಶೆಟ್ಟಿ, ರಂಗಭೂಮಿ, ಚಲನಚಿತ್ರ ನಟರಾದ ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಶರತ್ ಉಚ್ಚಿಲ, ಶರತ್ ಮಂಗಳೂರು ಮೊದಲಾದವರು ಉಪಸ್ಥಿತರಿದ್ದು ಶುಭ ಹಾರೈಸಿದರು.