14 ತಿಂಗಳ ಮಗುವನ್ನು ಹತ್ಯೆಗೈದ ಪಾಪಿ ತಂದೆ

ರಾಯಚೂರು,ಸೆ 05: ತಂದೆಯೊಬ್ಬ ತನ್ನ 14 ತಿಂಗಳ ಮಗುವನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕನಸವಿಯ ಗ್ರಾಮದಲ್ಲಿ ವರದಿಯಾಗಿದೆ.

ಲಿಂಗಸುಗೂರು ತಾಲೂಕಿನ ಕನಸಾವಿ ಗ್ರಾಮದ ನಿವಾಸಿ 32 ವರ್ಷದ ಮಹಾಂತೇಶ್ ಆರೋಪಿ. ಮೃತ ಮಗುವನ್ನು ಅಭಿನವ (14) ಎಂದು ಗುರುತಿಸಲಾಗಿದೆ.

ಪತಿ-ಪತ್ನಿ ಜಗಳದ ಹಿನ್ನಲೆಯಲ್ಲಿ ಆರೋಪಿ ಮಗುವನ್ನು ಕೊಲೆ ಮಾಡಿ ಕನಸವಿ ಗ್ರಾಮದ ಹೊರವಲಯದಲ್ಲಿ ಮೃತದೇಹವನ್ನು ಬಚ್ಚಿಟ್ಟಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪತ್ನಿ ಭೀಮವ್ವ ಮುದಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಮಗು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಿಸಿಕೊಡಿದ್ದ ಪೊಲೀಸರಿಗೆ ಮಹಾಂತೇಶ್ ಮೇಲೆ ಅನುಮಾನ ಬಂದಿದೆ. ವಿಚಾರಣೆಗೊಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದು, ಮಗುವಿನ ಮೃತದೇಹವನ್ನು ಸುಟ್ಟಿರುವುದಾಗಿ ಹೇಳಿದ್ದಾನೆ. ಆರೋಪಿ ಮೂರು ದಿನಗಳ ಬಳಿಕ ಶವ ಬಚ್ಚಿಟ್ಟಿರುವ ಸ್ಥಳವನ್ನು ತೋರಿಸಿದ್ದಾನೆ ಎನ್ನಲಾಗಿದೆ.

You cannot copy content from Baravanige News

Scroll to Top