‘ನಾನು ನನ್ನ ಅಪ್ಪ ಅಮ್ಮನಿಗೆ ಹುಟ್ಟಿದ್ದು…ಸನಾತನ ಧರ್ಮಕ್ಕಲ್ಲ’ – ಪ್ರಕಾಶ್ ರಾಜ್

ಬೆಂಗಳೂರು : ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಹೇಳಿಕೆ ನಂತರ ಇದೀಗ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಯಾಗುತ್ತಿದ್ದು, ಇದೀಗ ಈ ಚರ್ಚೆಗೆ ಸಂಬಂಧಿಸಿದಂತೆ ಪ್ರಕಾಶ್ ರಾಜ್ ಹೇಳಿಕೆ ನೀಡಿದ್ದು, ನಾನು ನನ್ನ ಅಪ್ಪ ಅಮ್ಮನಿಗೆ ಹುಟ್ಟಿದ್ದೆನೆಯೇ ಹೊರತು ಸನಾತನ ಧರ್ಮಕ್ಕಲ್ಲ ಎಂದಿದ್ದಾರೆ.


ಬೆಂಗಳೂರಿನಲ್ಲಿ ಗೌರಿ ಸ್ಮಾರಕ ಟ್ರಸ್ಟ್‌ ವತಿಯಿಂದ ನಡೆದ, ಗೌರಿ ಲಂಕೇಶ್‌ ಅವರ 6ನೇ ಹುತಾತ್ಮ ದಿನದ ಅಂಗವಾಗಿ ನಡೆದ ಸರ್ವಾಧಿಕಾರದ ಕಾಲದಲ್ಲಿ ಭಾರತದ ಮರು ಕಲ್ಪನೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಹುಭಾಷಾ ನಟ ಪ್ರಕಾಶ್‌ ರಾಜ್‌, ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಾರೆ.

ಇದೇ ವೇಳೆ ನಾನು ಇಲ್ಲಿಗೆ ಬರುವ ಮುನ್ನ ಖಾಸಗಿ ಚಾನೆಲ್ನಲ್ಲಿ ಸಂದರ್ಶನಕ್ಕೆ ಹೋಗಿದ್ದೆ, ಅಲ್ಲಿ ಅದಾಲತ್ ನಡೆಸುತ್ತೇವೆ ಎಂದು ಹೇಳಿದ್ದರು. ಸುಮಾರು 30 ಮಂದಿ ಇದ್ದರು, ಅವರೆಲ್ಲರು ಕಾವಿ ಧರಿಸಿದ್ದರು. ಅದರಲ್ಲೊಬ್ಬ ನೀವು ಕಾಂಗ್ರೆಸ್ನವರ ಎಂದ, ಅದಕ್ಕೆ ನಾನು ನಿಮ್ಮ ಪಕ್ಷದ ವಿರೋಧಿ ಎಂದೆ. ಮತ್ತೊಬ್ಬ ನೀವು ಸನಾತನ ಧರ್ಮ ಅಲ್ವಾ ಎಂದು ಪ್ರಶ್ನೆ ಕೇಳಿದಾ, ಅದಕ್ಕೆ ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಾನು ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ” ಎಂದು ಪ್ರಕಾಶ್ ರಾಜ್ ಹೇಳಿಕೆ ನೀಡಿದ್ದಾರೆ.

Scroll to Top