ಹುಲಿವೇಷಧಾರಿಗಳ ಜೊತೆಗೆ ಶಾಲಾ ಶಿಕ್ಷಕಿಯರ ಭರ್ಜರಿ ಡ್ಯಾನ್ಸ್ : ಸೀರೆಯುಟ್ಟು ಹೆಜ್ಜೆ ಹಾಕಿದ್ದನ್ನು ಕಂಡು ನೆಟ್ಟಿಗರೇ ಸುಸ್ತು

ಉಡುಪಿ: ಪ್ರತಿದಿನ ಸಾಕಷ್ಟು ಡ್ಯಾನ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಾ ಇರುತ್ತವೆ. ಈ ಬಾರಿ ಶಾಲೆಯೊಂದರಲ್ಲಿ ಶಿಕ್ಷಕಿಯರು ಹಾಗೂ ವಿದ್ಯಾರ್ಥಿನಿಯರ ಜೊತೆ ಹುಲಿ ಡ್ಯಾನ್ಸ್ ಮಾಡಿ ನೆಟ್ಟಿಗರ ಗಮನವನ್ನು ಸೆಳೆದಿದ್ದಾರೆ.

ಹುಲಿವೇಷಧಾರಿಗಳ ಜೊತೆ ಶಿಕ್ಷಕಿಯರು ಅದ್ಭುತವಾಗಿ ಡ್ಯಾನ್ಸ್ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಉಡುಪಿಯ ಮಣಿಪಾಲದ ಶಾಲೆಯಲ್ಲಿ ಹುಲಿವೇಷಧಾರಿಗಳು ಹುಲಿ ಮ್ಯೂಸಿಕ್ಗೆ ಡ್ಯಾನ್ಸ್ ಮಾಡಿದ್ದ ವಿಡಿಯೋ ಇದಾಗಿದೆ. ಇದೇ ವೇಳೆ ಎಂಟ್ರಿ ಕೊಟ್ಟ ಶಿಕ್ಷಕಿಯರು ವಿದ್ಯಾರ್ಥಿಗಳ ಜೊತೆ ಮಕ್ಕಳಾಗಿ ಸಖತ್ ಸ್ಟೆಪ್ ಹಾಕಿದ್ದಾರೆ.

ಇನ್ನು ಈ ವಿಡಿಯೋವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಾಮಾಜಿಕ ಜಾಲತಾಣವಾದ ‘X’ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Scroll to Top