ಶಿರ್ವ : ಆರೋಗ್ಯ ಮಾತಾ ದೇವಾಲಯದಲ್ಲಿ ಸಂಭ್ರಮದ ತೆನೆ ಹಬ್ಬ

ಶಿರ್ವ : ಉಡುಪಿ ಕೆಥೋಲಿಕ್‌ ಧರ್ಮಪ್ರಾಂತ್ಯದ ಶಿರ್ವ ವಲಯದ ಪ್ರಮುಖ ಚರ್ಚುಗಳಲ್ಲೊಂದಾದ ಶಿರ್ವ ಆರೋಗ್ಯಮಾತಾ ದೇವಾಲಯದಲ್ಲಿ ವಲಯದ ಪ್ರಧಾನ ಧರ್ಮಗುರು ರೆ|ಫಾ|ಡಾ| ಲೆಸ್ಲಿ ಡಿಸೋಜಾ ಅವರ ನೇತೃತ್ವದಲ್ಲಿ ತೆನೆ ಹಬ್ಬದ (ಮೊಂತಿ ಫೆಸ್ಟ್‌) ಸಂಭ್ರಮಾಚರಣೆ ಸೆ.8 ರಂದು ನಡೆಯಿತು.

ಭಕ್ತಾಧಿಗಳ ಉಪಸ್ಥಿತಿಯಲ್ಲಿ ಪ್ರಧಾನ ಧರ್ಮಗುರು ರೆ|ಫಾ|ಡಾ| ಲೆಸ್ಲಿ ಡಿಸೋಜಾ ,ಸಹಾಯಕ ಧರ್ಮಗುರು ರೆ|ಫಾ| ರೆ|ಫಾ| ರೋಲ್ವಿನ್‌ ಅರಾನ್ಹಾ ಬಲಿ ಪೂಜೆ ನೆರವೇರಿಸಿ ಭಕ್ತಾಧಿಗಳಿಗೆ ತೆನೆ ವಿತರಿಸಿದರು.


ಭವ್ಯ ಮೆರವಣಿಗೆ

ಸಂತ ಮೇರಿ ಪ್ರೌಢ ಶಾಲೆಯ ಹಿಲಾರಿ ರಂಗಮಂಟಪದಲ್ಲಿ ತೆನೆಯಿರಿಸಿ ಮಾತೆ ಕನ್ಯಾ ಮೇರಿಯ ಮೂರ್ತಿಗೆ ಪ್ರಧಾನ ಧರ್ಮಗುರು ರೆ|ಫಾ|ಡಾ| ಲೆಸ್ಲಿ ಡಿಸೋಜಾ, ಸಹಾಯಕ ಧರ್ಮಗುರು ರೆ|ಫಾ| ರೆ|ಫಾ| ರೋಲ್ವಿನ್‌ ಅರಾನ್ಹಾ ಮತ್ತು ಬ್ರ|ಜೇಸನ್‌ ಪ್ರಾರ್ಥನಾ ವಿಧಿ ನೆರವೇರಿಸಿ ಭಕ್ತಾಧಿಗಳು ಮೂರ್ತಿಗೆ ಪುಷ್ಪಾರ್ಚನೆ ನಡೆಸಿದರು. ಮಾತೆ ಕನ್ಯಾ ಮೇರಿಯ ಮೂರ್ತಿ ಮತ್ತು ತೆನೆಯನ್ನು ಮೆರವಣಿಗೆಯೊಂದಿಗೆ ಚರ್ಚ್‌ನವರೆಗೆ ಕೊಂಡೊಯ್ದ ಬಳಿಕ ಬಲಿಪೂಜೆ ನೆರವೇರಿತು.


ಚರ್ಚ್‌ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್‌ ಅರಾನ್ಹಾ, ಕಾರ್ಯದರ್ಶಿ ಫ್ಲೇವಿಯಾ ಡಿಸೋಜಾ, ಸದಸ್ಯರಾದ ವಿಲ್ಸನ್‌ ರೊಡ್ರಿಗಸ್‌, ಜೂಲಿಯಾನ್‌ ರೊಡ್ರಿಗಸ್‌, ಮೋಹನ್‌ ನೊರೊನ್ಹಾ, ಚರ್ಚ್‌ ಆಯೋಗದ ಲೀನಾ ಮತಾಯಸ್‌, ಪ್ರಮುಖರಾದ ಪೀಟರ್‌ ಕೋರ್ಡಾ, ಮೈಕಲ್‌ ಡಿಸೋಜಾ,ಫೆಲಿಕ್ಸ್‌ ಡಿಸೋಜಾ, ಆಲ್ವಿನ್‌ ಡಿಸೋಜಾ, ಎಡ್ವರ್ಡ್‌ ಮಿಸ್ಕಿತ್‌, ಡೆನ್ನಿಸ್‌ ಮತಾಯಸ್‌, ಆರ್ವಿನ್‌ ಡಿಸೋಜಾ, ಪ್ರೊ| ರೊನಾಲ್ಡ್‌ ಮೊರಾಸ್‌, ಚರ್ಚ್‌ನ ಆರ್ಥಿಕ ಸಮಿತಿಯ ಸದಸ್ಯರು, ನೇಟಿವಿಟಿ ಕಾನ್ವೆಂಟ್‌ನ ಧರ್ಮ ಭಗಿನಿಯರು,ವಿವಿಧ ವಾರ್ಡ್‌ಗಳ ಗುರಿಕಾರರು,ಭಕ್ತಾಧಿಗಳು ಉಪಸ್ಥಿತರಿದ್ದರು.

ಶಿರ್ವ ವಲಯದ ಪಿಲಾರು, ಪೆರ್ನಾಲು, ಪಾಂಬೂರು, ಕಳತ್ತೂರು ಮತ್ತು ಮೂಡುಬೆಳ್ಳೆ ಚರ್ಚುಗಳಲ್ಲಿ ಕೂಡಾ ಬಲಿಪೂಜೆಯೊಂದಿಗೆ ತೆನೆ ಹಬ್ಬದ ಸಂಭ್ರಮ ಸಂಪನ್ನಗೊಂಡಿತು.

Scroll to Top