ಮಂಗಳೂರಿನ ಮೋತಿ ಮಹಲ್ ಹೋಟೆಲ್ ಸ್ವಿಮ್ಮಿಂಗ್ ಪೂಲ್ನಲ್ಲಿ ಕೇರಳ ಬ್ಯಾಂಕ್‌ ಅಧಿಕಾರಿ ಮೃತದೇಹ ಪತ್ತೆ

ಮಂಗಳೂರು : ಕರಾವಳಿ ನಗರಿಯ ಪ್ರತಿಷ್ಠಿತ ಹೊಟೇಲ್ ನ ಈಜು ಕೊಳದಲ್ಲಿ ಮೃತದೇಹ ಪತ್ತೆಯಾಗಿದೆ.

ಮಂಗಳೂರಿನ ಪ್ರತಿಷ್ಠಿತ ಮೋತಿ ಮಹಲ್ ಹೊಟೇಲ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ‌ ಬ್ಯಾಂಕ್‌ ಅಧಿಕಾರಿ ಸಾವಿಗೀಡಾಗಿದ್ದಾರೆ.

ಮೃತ ವ್ಯಕ್ತಿ ಕೇರಳದ ತಿರುವನಂತಪುರಂ ನಿವಾಸಿ ಗೋಪು ಆರ್ ನಾಯರ್ ಎಂದು ತಿಳಿದು ಬಂದಿದೆ.

ಯೂನಿಯನ್ ಬ್ಯಾಂಕ್ ಅಧಿಕಾರಿಯಾದ ಗೋಪು ಆರ್ ನಾಯರ್ ಅವರು ನಿನ್ನೆ ಭಾನುವಾರ ಮಂಗಳೂರಿಗೆ ಬಂದು ಮೋತಿ ಮಹಲ್ ಹೊಟೇಲ್ ನಲ್ಲಿ ಉಳಿದು ಕೊಂಡಿದ್ದರು. ಬ್ಯಾಂಕ್ ಅಧಿಕಾರಿ ನಿನ್ನೆ ಸಂಜೆ 4 ಗಂಟೆ ವೇಳೆ ಹೊಟೇಲ್ ರೂಮ್ ನಿಂದ ಹೊರ ಹೋಗಿದ್ದರು. ಸ್ಥಳಕ್ಕೆ ಪಾಂಡೇಶ್ವರ ಠಾಣೆಯ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಬ್ಯಾಂಕ್ ಅಧಿಕಾರಿ ಮದ್ಯ ಸೇವಿಸಿ ಸ್ವಿಮ್ಮಿಂಗ್..!??

ಹೊಟೇಲ್ ನ ಈಜುಕೊಳದಲ್ಲಿ ಮೃತದೇಹ ಪತ್ತೆಯಾಗಿದ್ದು, 11 ಅಡಿ ಆಳದಲ್ಲಿದ್ದ ಗೋಪು ಆರ್ ನಾಯರ್ ಮೃತದೇಹವನ್ನು ಮುಳುಗು ತಜ್ಞರು ಹೊರತೆಗೆದಿದ್ದಾರೆ. ಈಜುತ್ತಿರುವಾಗ ಮೇಲೆ ಬರಲು ಸಾಧ್ಯವಾಗದೆ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಹೊಟೇಲ್ ರೂಂನಲ್ಲಿ ಮದ್ಯ ಸೇವಿಸಿ ಸ್ವಿಮ್ಮಿಂಗ್ ಫೂಲ್ ಗೆ ಇಳಿದಿರುವ ಅನುಮಾನವಿದೆ. ರೂಮ್ ನಲ್ಲಿ ಖಾಲಿಯಾದ ಮದ್ಯ ಬಾಟಲಿ, ಫುಡ್ ಪತ್ತೆಯಾಗಿದೆ.

You cannot copy content from Baravanige News

Scroll to Top