ಶಿರ್ವ, ಸೆ.12: ಗ್ರಾಮ ಪಂಚಾಯತ್ ನ SLRM ಘಟಕಕ್ಕೆ (ತ್ಯಾಜ್ಯ ನಿರ್ವಹಣಾ ಘಟಕ)ಹಿಮಾಚಲ ಪ್ರದೇಶ, ಉತ್ತರಾಖಂಡದ ತಂಡದ (WASTE WARRIORS SOCITY) ಇಂದು ಅಧ್ಯಯನ ಪ್ರವಾಸದ ಅಂಗವಾಗಿ ಭೇಟಿ ನೀಡಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಸಮಗ್ರ ಮಾಹಿತಿ ಪಡೆದರು.
ಶಿರ್ವ ಗ್ರಾಮ ಪಂಚಾಯತ್ ನ ಅಭಿವೃದ್ದಿ ಅಧಿಕಾರಿ ಶ್ರೀ ಅನಂತಪದ್ಮನಾಭ ನಾಯಕ್ ರವರು ತಂಡದವರನ್ನು ಸ್ವಾಗತಿಸಿ ಶಿರ್ವ ಘಟಕದ ನಿರ್ವಹಣೆ, ಆದಾಯ, ಜನರ ಸಹಕಾರ, ಘಟಕದ ಸಿಬ್ಬಂಧಿಯವರ ಕಾರ್ಯವೈಖರಿ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. 11 ಮಂದಿ ತಂಡದ ನಾಯಕಿ ನಿಧಿಯವರು ವಿಚಾರವಿನಿಮಯಮಾಡಿಕೊಂಡು ಇಲ್ಲಿನ ಘಟಕ ನಿರ್ವಹಣೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಶಿರ್ವ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀ ವಿಲ್ಸನ್ ರೊಡ್ರಿಗಸ್, ಮಾಜಿ ಅಧ್ಯಕ್ಷ ಶ್ರೀ ಕೆ ಆರ್ ಪಾಟ್ಕರ್ ರವರು ತಂಡದವರೊಂದಿಗೆ ಸಂವಾದ ನಡೆಸಿ ಹಿಮಾಚಲ ಪ್ರದೇಶದಲ್ಲಿನ ಘಟಕ ನಿರ್ವಹಣೆ ಬಗ್ಗೆ ಮಾಹಿತಿ ವಿನಿಮಯಮಾಡಿಕೊಂಡರು.ಶಿರ್ವ ಗ್ರಾ.ಪಂ ನ ಘಟಕದ ಕಸ, ಪ್ಲಾಸ್ಟಿಕ್, ತ್ಯಾಜ್ಯ ನಿರ್ವಹಣೆ ವಿಧಾನ,ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿ, ಕೈ ತೋಟ ಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಘಟಕದ ಸಿಬ್ಬಂಧಿಯವರೊಂದಿಗೆ ಕೆಲವು ಮನೆ, ಮನೆಗೆ ತೆರಲಿ ಸಿಬ್ಬಂಧಿಯವರೊಂದಿಗೆ ಕಸ ಸಂಗ್ರಹ ಕಾರ್ಯದಲ್ಲೂ ಪಾಲ್ಗೊಂಡರು.
ಬೆಂಗಳೂರು ಸಾಹಸ್ ಎನ್.ಜಿ.ಓ ಸಂಸ್ಥೆಯ ಕಾರ್ತಿಕ್ ರವರು ತಂಡಕ್ಕೆ ಮಾರ್ಗದರ್ಶನ ನೀಡಿದರು.
ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಚಂದ್ರಮಣಿ,ಘಟಕದ ಮೇಲ್ವಿಚರಕ ಶ್ರೀ ಕಿಶೋರ್,ಸಾಹಸ್ ಸಂಸ್ಥೆಯ ವಿಶಾಲ, ಅವಿನಾಶ್, ಘಟಕದ ಸಿಬ್ಬಂಧಿವರ್ಗದವರು ಉಪಸ್ಥಿತರಿದ್ದರು .