ಉಡುಪಿ: ಸ್ವತ್ತುಗಳ ಖರೀದಿ ಹೆಸರಲ್ಲಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ..!!!!

ಉಡುಪಿ : ಮಹಿಳೆಯೊಬ್ಬರು ಒಎಲ್ ಎಕ್ಸ್ ನಲ್ಲಿ ಮಾರಾಟಕ್ಕೆ ಹಾಕಿದ್ದ ಸೊತ್ತುಗಳನ್ನು ಖರೀದಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ವಂಚನೆ ನಡೆಸಿರುವ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.


ಉಷಾ ಕಿರಣ್ ಎಂಬ ಹೆಸರಿನವರು ಒಎಲ್ ಎಕ್ಸ್ ನಲ್ಲಿ ಸ್ವತ್ತುಗಳ ಮಾರಾಟದ ಜಾಹಿರಾತು ಪ್ರಕಟಿಸಿದ್ದರು. ಇದನ್ನು ಗಮನಿಸಿದ ವಂಚಕನೊಬ್ಬ ಮಹಿಳೆಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದ. ಬಳಿಕ ಮಹಿಳೆಯೊಬ್ಬರು ಕರೆ ಮಾಡಿ ಉಷಾ ಕಿರಣ್ ಅವರ ಜೊತೆ ಮಾತನಾಡಿದ್ದರು. ಹಾಗೂ ಸ್ವತ್ತುಗಳನ್ನು ಖರೀದಿಸುವುದಾಗಿ ತಿಳಿಸಿದ್ದರು. ತನ್ನಲ್ಲಿ ನಗದು ಹಣವಿಲ್ಲ ಗೂಗಲ್ ಪೇ ಮಾಡುವುದಾಗಿ ತಿಳಿಸಿದ್ದರು. ೨ ಗಂಟೆಯ ಬಳಿಕ ಮಹಿಳೆಯ ಮೊಬೈಲ್ ಗೆ ಹಲವು ಕ್ಯೂಆರ್ ಕೋಡ್ ಗಳು ಬಂದಿದ್ದು, ಇದಾದ ಬಳಿಕ ಹಂತ ಹಂತವಾಗಿ ಮಹಿಳೆಯ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಒಟ್ಟು 1,28,496 ರೂಪಾಯಿಗಳನ್ನು ಮಹಿಳೆ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top