ನಾಗರಹಾವಿಗೆ ಡಿಸೆಲ್ ಎರಚಿದವ ಈಗ ಆಸ್ಪತ್ರೆಯಲ್ಲಿ ನರಳಾಟ….!!

ಮುಲ್ಕಿ : ತುಳುನಾಡಿನಲ್ಲಿ ನಾಗನಿಗೆ ವಿಶೇಷ ಸ್ಥಾನಮಾನವಿದೆ. ಯಾವುದೇ ಜಾತಿ ಧರ್ಮಗಳೂ ಕೂಡ ನಾಗದೇವರ ವಿಚಾರದಲ್ಲಿ ಭಯ ಭಕ್ತಿಯಿಂದ ಇರುತ್ತಾರೆ. ಅನ್ಯಧರ್ಮಿಯರೂ ಕೂಡ ನಾಗದೇವರ ವಿಚಾರದಲ್ಲಿ ತಲೆ ಹಾಕುವುದಿಲ್ಲ. ಆದರೆ ಇಲ್ಲೊಬ್ಬ ಉತ್ತರ ಕರ್ನಾಟಕ ಮೂಲದ ವ್ಯಕ್ತಿ ನಾಗರ ಹಾವಿಗೆ ಡೀಸೆಲ್ ಎರಚಿ ವಿಕೃತಿ ಮರೆದಿದ್ದ, ಆದರೆ ಈಗ ಅವನು ಆಸ್ಪತ್ರೆಯಲ್ಲಿ ನರಳುತ್ತಿದ್ದಾನೆ.

ತುಳುನಾಡಿನಲ್ಲಿ ನಾಗದೇವರಿಗೆ ವಿಶೇಷ ಸ್ಥಾನ ಮಾನವಿದೆ, ತುಳುನಾಡಿನ ಪ್ರಥಮ ಹಬ್ಬವೇ ನಾಗರ ಪಂಚಮಿ, ಅದರಂತೆ ನಾಗರ ಹಾವನ್ನು ಕಂಡರೆ ತುಳು ನಾಡಿನಲ್ಲಿ ಪೂಜ್ಯ ಬಾವದಿಂದ ನೋಡುತ್ತಾರೆ, ಇದಕ್ಕೆ ಏನಾದರೂ ಸಮಸ್ಯೆಯುಂಟು ಮಾಡಿದರೆ ನಮಗೆ ತೊಂದರೆ ಕಟ್ಟಿಟ್ಟ ಬುಟ್ಟಿ ಎನ್ನುತ್ತಾರೆ.

ಕಳೆದ ಒಂದು ವಾರದ ಹಿಂದೆ ಕಿನ್ನಿಗೋಳಿ ಬಹುಮಹಡಿ ಕಟ್ಟಡದ ಸಮೀಪ ನಾಗರ ಹಾವೊಂದು ಕಂಡು ಬಂದಿದ್ದು ಉತ್ತರ ಕರ್ನಾಟಕದ ಕಾರ್ಮಿಕ ನೋರ್ವ ಅದಕ್ಕೆ ಡೀಸೆಲ್ ಎರಚಿದ್ದು, ಕೂಡಲೇ ಹಾವು ಮೈ ಉರಿಯಿಂದ ಒದ್ದಾಡತೊಡಗಿತ್ತು, ಕೂಡಲೇ ಸ್ಥಳೀಯರು ಉರಗ ರಕ್ಷಕ ಯತೀಶ್ ಕಟೀಲು ಅವರಿಗೆ ವಿಷಯ ತಿಳಿಸಿ ಹಾವಿಗೆ ಚಿಕಿತ್ಸೆ ನೀಡಿ, ಸಹಜ ಸ್ಥಿತಿಗೆ ಮರಳುವಂತೆ ಮಾಡಿದರು ಆದರೆ ಇದೀಗ ಡಿಸೇಲ್ ಎರಚಿದ ಕಾರ್ಮಿಕ ಮೈ ಉರಿಯ ಸಮಸ್ಯೆಯಿಂದ ಬಲಳುತಿದ್ದು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ, ನಾಗರ ಹಾವಿಗೆ ಡಿಸೇಲ್ ಎರಚಿದ ಕಾರಣ ಈ ಸಮಸ್ಯೆ ಪ್ರಾರಂಭವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

You cannot copy content from Baravanige News

Scroll to Top