ಉಡುಪಿ : ಕಡಿಯಾಳಿಯ ಗಣೇಶ ವಿಗ್ರಹ ಹಾಗೂ ಮೂರ್ತಿ ತಯಾರಿಕ ಘಟಕ, ಮಾರಾಟ ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಣಪತಿ ವಿಗ್ರಹ ತಯಾರಿಕೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸದಂತೆ ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸದಂತೆ ತಯಾರಿಕರಿಗೆ ಸೂಚನೆ ನೀಡಿದರು,ಬಣ್ಣವಿಲ್ಲದ ನೈಸರ್ಗಿಕ ವಿಗ್ರಹಗಳ ತಯಾರಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಲಾಯಿತು.
ಜಿಲ್ಲೆಯ ಸಾರ್ವಜನಿಕರು ಗಣೇಶ ವಿಗ್ರಹ ಸ್ಥಾಪನೆ ಮತ್ತು ವಿಸರ್ಜನೆ ಸಂದರ್ಭದಲ್ಲಿ ಜಿಲ್ಲೆಯ ಪರಿಸರ ಮತ್ತು ಜಲಮೂಲಗಳು ಕಲುಷಿತ ಗೊಳ್ಳದಂತೆ, ಶಾಂತಿ ಹಾಗೂ ಸೌಹಾರ್ದಯುತವಾಗಿ, ಪರಿಸರ ಸ್ನೇಹಿಯಾಗಿ ಗಣೇಶ ಚತುರ್ಥಿಯನ್ನು ಆಚರಣೆ ಮಾಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.