ಚೈತ್ರಾ ಕುಂದಾಪುರ ಅರೆಸ್ಟ್ : ದೇವರಿಗೆ 101 ಈಡುಗಾಯಿ ಹೊಡೆದು ಹರಕೆ ತೀರಿಸಿದ ಗ್ರಾಮಸ್ಥರು ; ಚೈತ್ರಾ ವಿರುದ್ಧ ಗ್ರಾಮಸ್ಥರು ಹರಕೆ ಹೊತ್ತುಕೊಂಡಿದ್ದು ಯಾಕೆ.!??

ಪಂಚಕೋಟಿ ನಾಮ ಹಾಕಿದ ಆರೋಪ ಕೇಸ್ನಲ್ಲಿ ಸದ್ಯ ಚೈತ್ರಾ ಮತ್ತು ಅವರ ಪಟಾಲಂ ಪೊಲೀಸರ ಆತಿಥ್ಯದಲ್ಲಿದೆ. ಆದ್ರೆ ಚೈತ್ರಾ ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಚಾರ ಹೊರಬಿದ್ದಿದೆ.

ವರ್ಷದ ಹಿಂದೇ ಚೈತ್ರಾ ಪ್ರಚೋದನ ಭಾಷಣ ಮಾಡಿದ್ದರು ಅಂತ ಆ ಊರ ಜನರು ದೇವರ ಮೊರೆ ಹೋಗಿದ್ದರು. ಗ್ರಾಮದಲ್ಲಿ ಆಶಾಂತಿ ಮೂಡಿಸೋರನ್ನು ನೀನೇ ನೋಡ್ಕೊಳಪ್ಪ ಅಂತ ಪ್ರಾರ್ಥಿಸಿದ್ರಂತೆ. ಸದ್ಯ ಜೈತ್ರಾ ಬಂದು ಹೋದ ಗ್ರಾಮದಲ್ಲಿ ಜನರು ಪೂಜೆ, ಹರಕೆ ತೀರಿಸಿದ್ದಾರೆ.

ಪೊಲೀಸರ ವಿಚಾರಣೆ ಅಂತ ಬರ್ತಿದ್ದಂತೆ ಮೂರ್ಚೆಗೆ ಹೋಗಿದ್ದ ಚೈತ್ರಾಗೆ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಅಲ್ಲದೇ ಚೈತ್ರಾಗೆ ಹೃದಯ ಸಂಬಂಧಿ ಚಿಕಿತ್ಸೆ ಅವಶ್ಯಕತೆ ಇರೋದ್ರಿಂದ ಕಾರ್ಡಿಯೋಲಜಿಗಾಗಿ ಚೈತ್ರಾ ಇನ್ನೂ ಆಸ್ಪತ್ರೆಯಲ್ಲಿರಬೇಕಾಗಿದೆ.

ಪಂಚಕೋಟಿ ನಾಮ ಹಾಕುವ ಇಡೀ ಪ್ಲಾನ್ ನಡೆದಿದ್ದೇ ಕಾಫಿ ನಾಡಲ್ಲಿ ಅನ್ನೋ ಸ್ಫೋಟಕ ಸತ್ಯವೂ ಹೊರಬಿದ್ದಿದೆ. ಇದ್ರೊಂದಿಗೆ ಚೈತ್ರಾ ಚಿಕ್ಕಮಗಳೂರಿನ ಹಲವು ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು. ಕೊಪ್ಪ ತಾಲೂಕಿನ ಮಾವಿನಕಟ್ಟೆಯಲ್ಲಿ ಕಳೆದ ವರ್ಷ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದರು ಅನ್ನೋ ಆರೋಪ ಕೇಳಿಬಂದಿತ್ತು.

ಅಂದು ವಿಘ್ನೇಶ್ವರ ಹಾಗೂ ಬ್ರಹ್ಮ ಜಟಿಗೇಶ್ವರನಿಗೆ ಗ್ರಾಮದಲ್ಲಿ ಶಾಂತಿ ಕದಡಲು ಯಾರು ಕಾರಣನೋ ಅವ್ರಿಗೆ ನೀನೇ ಪ್ರತಿಫಲ ಕೊಡು ಎಂದು ಕೆಲ ಗ್ರಾಮಸ್ಥರು ಹರಕೆ ಕಟ್ಟಿದ್ರಂತೆ. ಅಲ್ಲದೇ ಅಂದು ರಾಜಕೀಯ ದುರುದ್ದೇಶದಿಂದಲೇ ಚೈತ್ರಾ ಭಾಷಣ ಮಾಡಿದ್ದು ಅನ್ನೋ ಆರೋಪವೂ ಕೇಳಿಬಂದಿತ್ತು. ಈ ಎಲ್ಲದರ ನಡುವೆ ಚೈತ್ರಾ ಲಾಕ್ ಆಗಿದ್ದು ಕುತೂಹಲ ಕೆರಳಿಸಿದೆ.

ಕಳೆದ ವಾರ ಚೈತ್ರಾ ಕುಂದಾಪುರ ಅಂಡ್ ಟೀಂ ಅಂದರ್ ಆಗಿದೆ. ಸಿಸಿಬಿ ಪೊಲೀಸರಂತೂ ಬಿಟ್ಟೂ ಬಿಡದೇ ಚೈತ್ರಾ ಹಾಗೂ ಪಟಾಲಂನ ಜಾಡು ಹಿಡಿದು ಬೆಂಡೆತ್ತುತ್ತಿದೆ. ಆಕೆಯ ಐಷಾರಾಮಿ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇತ್ತ ಚೈತ್ರಾಳನ್ನು ಸಿಸಿಬಿ ಪೊಲೀಸರು ಹೆಡೆಮುರಿಕಟ್ಟುತ್ತಿದ್ದಂತೆ ಮಾವಿನಕಟ್ಟೆಯ ಕೆಲ ಗ್ರಾಮಸ್ಥರು ವಿಘ್ನೇಶ್ವರನಿಗೂ, ಬ್ರಹ್ಮ ಜಟಿಕೇಶ್ವರನಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದಾರೆ. ದೇವಸ್ಥಾನದ ಮುಂದೆಯೇ 101 ಈಡುಗಾಯಿ ಹೊಡೆದು ಗ್ರಾಮ ಈಗ ಶುದ್ದವಾಯ್ತು ಅಂತಿದ್ದಾರೆ.


ಚೈತ್ರಾ ಕುಂದಾಪುರ ಅಂಡ್ ಟೀಂ ಈಗ ಸಿಸಿಬಿ ಬಲೆಯಲ್ಲಿದೆ. ಭಾಷಣದಿಂದಲೇ ಗುರುತಿಸಿಕೊಂಡಿದ್ದ ಚೈತ್ರಾಗೇ ಈಗ ಯಾರೊಬ್ರು ಸಾಥ್ ಕೊಡೋ ಲಕ್ಷಣ ಕಾಣಿಸ್ತಿಲ್ಲ. ಆಕೆಯ ಪರವಂತೂ ಯಾರೂ ಚಕಾರ ಎತ್ತುತ್ತಿಲ್ಲ. ಚೈತ್ರಾ ಪ್ರಚೋದನಕಾರಿಯಾಗಿ ಭಾಷಣ ಮಾಡಿಯೇ ಅಶಾಂತಿ ಸೃಷ್ಟಿಸ್ತಾರೆ ಅಂತ ಜನರು ದೇವರ ಮೊರೆ ಹೋಗಿದ್ದು ಅದರಂತೆ ಚೈತ್ರಾ ಪೊಲೀಸರ ಆತಿಥ್ಯ ಸ್ವೀಕರಿಸಿದ್ದಾಳೆ. ಈ ಬೆನ್ನಲ್ಲೇ ಗ್ರಾಮಸ್ಥರು ದೇವರಿಗೆ ಹರಕೆ ತೀರಿಸಿದ್ದು ಕುತೂಹಲ ಮೂಡಿಸಿದೆ.

Scroll to Top