ಈ ಸೋಶಿಯಲ್ ಮೀಡಿಯಾ ಅನ್ನೋದೇ ಹಾಗೇ. ಏನಾದರೂ ಇಷ್ಟ ಆಯ್ತು ಅಂದ್ರೆ ವೈರಸ್ ಥರಾ ಎಲ್ಲಿ ನೋಡಿದರೂ ಇದರದ್ದೇ ಹಾವಳಿ ಇರುತ್ತೆ. ಅದರಲ್ಲೂ ರೀಲ್ಸ್ ಮಾಡೋರಿಗೆ ಹಬ್ಬನೇ ಹಬ್ಬ. ಈಗ ಯಾವುದೇ ರೀಲ್ಸ್ ನೋಡಿದರೂ ನಮಗೆ ಕೇಳೋಕೆ, ನೋಡೋಕೆ ಸಿಗೋದು ಒಂದೇ ಒಂದು ‘ನಾನು ನಂದಿನಿ ಬೆಂಗಳೂರು ಬಂದಿನಿ’ ಅನ್ನೋ ವೈರಲ್ ಸಾಂಗ್. ರೀಲ್ಸ್ ಮಾಡೋರಂತೂ ಫುಲ್ ಹಬ್ಬ ಮಾಡ್ತಾ ಇದ್ದಾರೆ.
ಟ್ರೋಲ್ ಪೇಜ್ಗಳು ಅಷ್ಟೇ ಗಣೇಶ ಹಬ್ಬಕ್ಕಿಂತ ಜೋರು ಎಂಜಾಯ್ ಮಾಡ್ತಾ ಇದ್ದಾರೆ. ಅಷ್ಟರ ಮಟ್ಟಿಗೆ ಈ ನಂದಿನಿ ಮೋಡಿ ಮಾಡಿದೆ. ಈಗ ಯಾರನ್ನೇ ಭೇಟಿ ಮಾಡಿದರೂ ಇದೇ ಸ್ಟೈಲು. ಯಾರತ್ರ ಮಾತಾಡಿದ್ರು ಇದೇ ರೀಲು. ಫೋನ್ ಬಳಸೋ ಪ್ರತಿಯೊಬ್ಬರ ಮನೆಮಗಳಾಗೋಗಿ ಬಿಟ್ಟಿದ್ದಾಳೆ ಈ ನಂದಿನಿ.
ಈ ಬೆಂಗಳೂರಿನ ನಂದಿನಿಯ ಸೃಷ್ಟಿಕರ್ತ ಯಾರು ಅಂತ ನೋಡಿದ್ರೆ ಮೋಸ್ಟ್ ಟ್ಯಾಲೆಂಟೆಡ್ ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ವಿಕಿಪೀಡಿಯ. ನಾನು ನಂದಿನಿ ಹಾಡು ಇಷ್ಟೊಂದು ಟ್ರೆಂಡ್, ಬ್ರ್ಯಾಂಡ್ ಆಗೋಕೆ ಕಾರಣ ವಿಕಿಪೀಡಿಯ. ವಿಕಿಪೀಡಿಯ ಬಗ್ಗೆ ಜಾಸ್ತಿ ಹೇಳೋದು ಬೇಕಿಲ್ಲ. ಈ ಟ್ರೆಂಡಿಂಗ್ ವಿಡಿಯೋಗಳನ್ನ ಫಾಲೋ ಮಾಡೋರಿಗೆ ವಿಕಿಪೀಡಿಯ ಬಗ್ಗೆ ಗೊತ್ತೇ ಇರುತ್ತೆ. ಗೊತ್ತಿಲ್ಲದೇ ಇರೋರಿಗೆ ಸಣ್ಣ ಪರಿಚಯ ಬೇಕು ಅಷ್ಟೇ.
ಈ ವಿಕಿಪೀಡಿಯ ವಿಡಿಯೋಗಳನ್ನ ಪ್ರೊಡ್ಯೂಸ್ ಮಾಡ್ತಾ ಇರ್ತಾರೆ. ಕಾಂಟ್ರುವರ್ಸಿ, ಟ್ರೆಂಡಿಂಗ್, ಪೊಲಿಟಿಕಲ್ ಡ್ರಾಮಾ ಹೀಗೆ ಸೊಸೈಟಿಯಲ್ಲಿ ಏನೇ ಡೆವಲಪ್ಮೆಂಟ್ ಆದ್ರು ತಮ್ಮದೇ ಸ್ಟೈಲ್ನಲ್ಲಿ ಅದಕ್ಕೊಂದು ವಿಶೇಷವಾದ ವಿಡಿಯೋ ಕ್ರಿಯೇಟ್ ಮಾಡೋದು ವಿಕಿಪೀಡಿಯ ಹವ್ಯಾಸ. ಇಂಥಾ ವಿಡಿಯೋಗಳಿಂದಲೇ ಇವ್ರು ಫೇಮಸ್. ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಸಾಮಾನ್ಯರೂ ಈತನಿಗೆ ಫ್ಯಾನು.. ಸೆಲೆಬ್ರಿಟಿಗಳು ಇವರ ಪ್ರತಿಭೆಗೆ ಫಿದಾ ಆಗಿದ್ದಾರೆ.
ಅಂದ್ಹಾಗೆ ಈ ಹಾಡು ಇಷ್ಟೊಂದು ವೈರಲ್ ಆಗೋಕೆ ಕಾರಣ ಅದರಲ್ಲಿರುವ ಕಂಟೆಂಟ್. ವಿಕಿಪೀಡಿಯಾ ಬಳಸಿರುವ ಲೈನ್ಸ್. ಬೆಂಗಳೂರು ಈಗೊಂಥರಾ ಐಟಿ ಹಬ್. ದೂರದೂರದ ಊರುಗಳಿಂದ ಕೆಲಸ ಹುಡುಕಿ ಬರೋರು ಸಿಲಿಕಾನ್ ಸಿಟಿಯಲ್ಲಿ ಜಾಸ್ತಿ ಇದ್ದಾರೆ. ಬೆಂಗಳೂರಲ್ಲಿ ಸ್ವಂತ ಮನೆಗಳಲ್ಲಿ ಇರೋರಿಗಿಂತ ಬಾಡಿಗೆ ಮನೆಯಲ್ಲಿ ಇರೋರೇ ಜಾಸ್ತಿ ಅಂತಾರೆ. ಆದ್ರೆ ಬಾಡಿಗೆ ಮನೆಗಳಿಗಿಂತ ಪಿಜಿಗಳಲ್ಲಿ ವಾಸ ಮಾಡೋರು ಇನ್ನೂ ಹೆಚ್ಚು. ಒಂದೊಂದು ಪಿಜಿಗಳದ್ದು ಒಂದೊಂದು ಕಥೆ. ಕೆಲವು ಕಡೆ ರೂಮ್ ಚೆನ್ನಾಗಿದ್ರೆ ಊಟ ಚೆನ್ನಾಗಿರಲ್ಲ. ಊಟ ಚೆನ್ನಾಗಿದ್ರೆ ಬರೋ ಸಂಬಳ ಸಾಕಾಗಲ್ಲ. ಸಂಬಳ ಸಾಕಾದ್ರೆ ಇನ್ನೇನೋ ಚೆನ್ನಾಗಿರಲ್ಲ. ಹಾಗಾಗಿ ಈ ಐಟಿ ಬದುಕು ಹಾಗೂ ಪಿಜಿಗಳ ಲೈಫ್ಸ್ಟೈಲ್ ಬಗ್ಗೆನೇ ಈ ಸಾಂಗ್ ಮಾಡಲಾಗಿದೆ. ಹಾಗಾಗಿಯೇ ಈ ಸಾಂಗ್ ಇಷ್ಟೊಂದು ಹಿಟ್ ಆಗಿದೆ. ಅದರಲ್ಲೂ ಬೆಂಗಳೂರು ಜನರಿಗೆ ಈ ಸಾಂಗ್ ತುಂಬಾ ಕನೆಕ್ಟ್ ಆಗಿದ್ದು, ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ. ಈ ಹಾಡಿನ ಒರಿಜಿನಲ್ ಟ್ಯೂನ್ ಇಂಗ್ಲೀಷ್‌ನ ಐಮ್ ಬಾರ್ಬಿ ಗರ್ಲ್ ಹಾಡಿನದ್ದು. ವರ್ಲ್ಡ್ ಮ್ಯೂಸಿಕ್ ಲವರ್ಸ್ ಇಷ್ಟ ಪಟ್ಟಿರುವ ಬಾಬಿ ಗರ್ಲ್ ಟ್ಯೂನ್ ಬಳಸಿ ವಿಕಿಪೀಡಿಯ ‘ನಾನು ನಂದಿನಿ’ ಅನ್ನೋ ಸ್ಪೆಷಲ್ ಸಾಂಗ್ ಕಂಪೋಸ್ ಮಾಡಿರೋದ್ರಿಂದ ಯೂನಿವರ್ಸಲ್ ಆಗಿ ಎಲ್ಲರನ್ನ ನಂದಿನಿ ತಲುಪ್ತಾ ಇದ್ದಾಳೆ.
ಸದ್ಯ, ನಾನು ನಂದಿನಿ ಟಾಪ್ ಆಫ್ ದಿ ಟೌನ್ ಆಗಿದೆ. ರೀಲ್ಸ್ ಪ್ರಿಯರಂತೂ ಈ ಹಾಡಿಗೆ ಬಗೆ ಬಗೆಯ ರೀಲ್ಸ್ಗಳನ್ನ ಮಾಡಿ ಎಂಜಾಯ್ ಮಾಡ್ತಾ ಇದ್ದಾರೆ. ಮಕ್ಕಳಿಗೂ ಈ ಸಾಂಗ್ ಇಷ್ಟ ಆಗಿ ಬಿಟ್ಟಿದೆ. ಮನೆಯಲ್ಲಿ ಸಾಕು ಪ್ರಾಣಿಗಳು ವೇಷಭೂಷಣ ಹಾಕಿ ರೀಲ್ಸ್ ಮಾಡ್ತಾ ಇದ್ದಾರೆ. ಸೋಶಿಯಲ್ ಮೀಡಿಯಾ ಅಂದ್ರೆ ಹೀಗೆ ಯಾವುದಾದರೂ ಒಂದು ಕ್ಲಿಕ್ ಆಯ್ತು ಅಂದ್ರೆ ಅದರ ಹಿಂದೇನೇ ಹೋಗಿ ಬೀಡುತ್ತಾರೆ. ಮೊನ್ನೆ ಕಾವಾಲಾಯ್ಯ, ಇವತ್ತು ನಾನು ನಂದಿನಿ,, ನಾಳೆ ಏನೋ ಗೊತ್ತಿಲ್ಲ. ಆದರೆ, ಹೊಸ ನೀರು ಬರೋವರಿಗೂ ಹಳೆ ನೀರಿನ ರುಚಿ ಕಮ್ಮಿ ಆಗಲ್ಲ ಬಿಡಿ.